Publish Date: Tue, 03 Apr 2018 (17:37 IST)
Updated Date: Tue, 03 Apr 2018 (17:39 IST)
ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು ಕಾಂಗ್ರೆಸ್ ಪಕ್ಷದಲ್ಲಿ ಹೆಣ್ಣ ಮಕ್ಕಳನ್ನು ಸಪ್ಲೈ ಮಾಡಿದವರಿಗೆ ವಿಶೇಷ ಆತಿಥ್ಯ ದೊರೆಯುತ್ತಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಪಿ.ಎಚ್. ನಿರಲಕೇರಿ ಅಸಮಾಧಾನವನ್ನು ಹೊರಹಾಕಿದ್ದಾರೆ.
ಹಿರಿಯ ನ್ಯಾಯವಾದಿ ಮತ್ತು ಕಾಂಗ್ರೆಸ್ ಪಕ್ಷದ ಧಾರವಾಡ ನಾಯಕ.ಪಿ.ಎಚ್. ನಿರಲಕೇರಿ ಇಂದು ಬೆಳಿಗ್ಗೆ ರಾಹುಲ್ ಗಾಂಧಿಯನ್ನು ಭೇಟಿ ಮಾಡಲು ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು.ವಿಮಾನ ನಿಲ್ದಾಣದ ಒಳಗೆ ಪ್ರವೇಶ ನೀಡದ ಹಿನ್ನಲೆಯಲ್ಲಿ ಅಸಮಾಧಾನ ಹೊರಹಾಕಿದ್ದಾರೆ.
ನಾಲ್ಕು ಜನ ಚೀಲಾಗಳನ್ನು ಹೆಂಗಸರನ್ನು ಸಪೈ ಮಾಡುವರಿಗೆ ಮಾತ್ರ ಕಾಂಗ್ರೇಸ್ ನಲ್ಲಿ ಆದ್ಯತೆ ಎಂದ ನಿರಲಕೇರಿ,.ಪಕ್ಷದ ಸಂಘಟನೆ ಇವರಿಂದ ಆಗುತ್ತದೆಯಾ ಎಂದು ಗುಡುಗಿ ಕಾಂಗ್ರೆಸ್ ನಾಯಕರಿಗೆ ನಾಚಿಗೆಯಾಗಬೇಕು ಎಂದು ಗುಡುಗಿದರು.
ಮುಂದುವರೆದು ನಾಲಾಯಕ್ ನನ್ನ ಮಕ್ಖು ಎಂದು ಅಸಮಾಧಾನವನ್ನು ಹೊರಹಾಕಿದ ನಿರಲಕೇರಿ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ವಿರುದ್ಧವೇ ಸಮರ ಸಾರಿರುವುದು ವಿಪಕ್ಷಗಳಿಗೆ ಮತ್ತೊಂದು ಅಸ್ತ್ರ ದೊರೆತಂತಾಗಿದೆ.