Webdunia - Bharat's app for daily news and videos

Install App

ಕಾಂಗ್ರೆಸ್​ಗೆ ರಿವರ್ಸ್​​ ಆಪರೇಷನ್​ ಭೀತಿ

Webdunia
ಸೋಮವಾರ, 3 ಏಪ್ರಿಲ್ 2023 (20:43 IST)
ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ.. ಈ ಹಿನ್ನೆಲೆಯಲ್ಲಿ ಟಿಕೆಟ್​ ಸಿಗದ ಆಕಾಂಕ್ಷಿಗಳು ಟಿಕೆಟ್​ ಸಿಗುವ ಪಕ್ಷಕ್ಕೆ ಜಂಪ್​ ಮಾಡ್ತಿದ್ದಾರೆ. BJP ಆಪರೇಷನ್​​​​​ ಕಮಲ ಮಾಡಿ ರಾಜ್ಯಾದ್ಯಂತ ಆಪರೇಷನ್ ಸ್ಪೆಷಲಿಸ್ಟ್​ ಆಗಿದೆ. ಇದೀಗ BJP ರಿವರ್ಸ್​ ಆಪರೇಷನ್​ ಮಾಡಿ ಮತ್ತೆ ಕಾಂಗ್ರೆಸ್​ಗೆ ಶಾಕ್​ ಕೊಡಲು ಮುಂದಾಗಿದೆ.. ಮಾಜಿ ಶಾಸಕ B.H. ಬನ್ನಿಕೋಡಗೆ BJP ಗಾಳ ಹಾಕಿದೆ. ಬಣಕಾರ್​ಗೆ ಹಿರೇಕೆರೂರು ಕಾಂಗ್ರೆಸ್​ ಟಿಕೆಟ್​ ಘೋಷಣೆಯಾದ ಬೆನ್ನಲ್ಲೇ ಬನ್ನಿಕೋಡ ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಬನ್ನಿಕೋಡ ಅವರನ್ನು ಬಿಜೆಪಿಗೆ ಕರೆತರಲು B.C.ಪಾಟೀಲ್​ ಕಸರತ್ತು ನಡೆಸಿದ್ದಾರೆ. ಇದಕ್ಕೆ ಪೂಕರವೆಂಬಂತೆ ಸಚಿವ B.C.ಪಾಟೀಲ್​ ಬನ್ನಿಕೋಡ ನಿವಾಸಕ್ಕೆ ಭೇಟಿ ನೀಡಿ ಬಿಜೆಪಿಗೆ ಬರುವಂತೆ ಆಹ್ವಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್​ಗೆ ರಿವರ್ಸ್​ ಭೀತಿ ಶುರುವಾಗಿದೆ. ಬಳಿಕ ಹಿರೇಕೆರೂರಿನಲ್ಲಿ ಮಾತನಾಡಿದ ಸಚಿವ B.C.ಪಾಟೀಲ್​​, ಬನ್ನಿಕೋಡ ಕಾಂಗ್ರೆಸ್ ಟಿಕೆಟ್ ವಂಚಿತರಾಗಿದ್ದಾರೆ, 2018ರಲ್ಲಿ ಒಟ್ಟಿಗೆ ಕಾಂಗ್ರೆಸ್​​ನಿಂದ ಚುನಾವಣೆ ಎದುರಿಸಿದ್ವಿ, ನಾನು ಪಕ್ಷ ಬಿಟ್ಟು ಬರುವಾಗ ಕರೆದಿದ್ದೆ ಅವರು ಬರಲಿಲ್ಲ. ತಾಲೂಕಿನ‌ ಅಭಿವೃದ್ಧಿಗೆ ಕೈ‌ಜೋಡಿಸಿ ಚುನಾವಣೆ ಮಾಡೋಣ, ಅಭಿವೃದ್ಧಿಗೆ ನಾಂದಿ ಹಾಡೋಣ ಎಂದು ಕೇಳಿಕೊಂಡಿದ್ದೇನೆ, ಪಕ್ಷಕ್ಕೆ ಬರುತ್ತಾರೆ ಎಂದು ಆಶಾದಾಯಕವಾಗಿದ್ದೇನೆ ಎಂದು B.C. ಪಾಟೀಲ್​​ ವಿಶ್ವಾಸ ವ್ಯಕ್ತಪಡಿಸಿದ್ರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೃಷ್ಣ ಪರಮಾತ್ಮ ಐದು ಗ್ರಾಮ ಕೇಳಿದಂತೆ ನಮ್ಮದು ಐದು ಬೇಡಿಕೆಗಾಗಿ ಪಾದಯಾತ್ರೆ: ಸಿಟಿ ರವಿ

ಕೆಪಿಎಸ್‌ಸಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾ

ನೈಸ್ ಪ್ರಾಜೆಕ್ಟ್‌ ವಿಚಾರ: ದೇವೇಗೌಡರು ಬೇಕಿದ್ರೆ ಕೋರ್ಟ್‌ ಹೋಗಲಿ, ಡಿಕೆ ಶಿವಕುಮಾರ್ ಸವಾಲು

ದುರ್ಗಾ ಪೂಜೆಯ ಸಮಯದಲ್ಲಿ ಮಾಂಸಾಹಾರ ಸೇವನೆ ವೈಯಕ್ತಿಕ ಆಯ್ಕೆ: ಬಿಜೆಪಿ

ರಷ್ಯಾದಲ್ಲಿ ಪತಿ ಅರೆಸ್ಟ್‌, ಬಿಡುಗಡೆಗಾಗಿ ಮೋದಿ ಸಹಾಯ ಕೋರಿದ ಪತ್ನಿ

ಮುಂದಿನ ಸುದ್ದಿ
Show comments