ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ತಣ್ಣಗಾಗಿದೆ ಎನ್ನುತ್ತಿರುವಾಗಲೇ ದೆಹಲಿಯಲ್ಲಿ ಸೋನಿಯಾ ಗಾಂಧಿಯಿಂದ ಮಹತ್ವದ ಸಂದೇಶವೊಂದು ರವಾನೆಯಾಗಿದೆ.
ರಾಜ್ಯದಲ್ಲಿ ಅಧಿಕಾರ ಹಂಚಿಕೆ ವಿವಾದ ತಣ್ಣಗಾಗಿದೆ ಎಂದೇ ಎಲ್ಲರೂ ಅಂದುಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ- ಡಿಕೆ ಶಿವಕುಮಾರ್ ಬ್ರೇಕ್ ಫಾಸ್ಟ್ ಮೀಟಿಂಗ್ ಮುಗಿಸಿ ನಾವಿಬ್ಬರೂ ಚೆನ್ನಾಗಿದ್ದೇವೆ ಎಂದೆಲ್ಲಾ ಸಾರಿದ್ದರು.
ಆದರೆ ಅಧಿಕಾರ ಹಂಚಿಕೆ ಫೈಟ್ ತಣ್ಣಗಾಗಿಲ್ಲ ಎನ್ನುವುದಕ್ಕೆ ಈಗ ಸೋನಿಯಾ ಗಾಂಧಿಯಿಂದ ಬಂದ ಸಂದೇಶವೇ ಸಾಕ್ಷಿ ಎನ್ನಲಾಗುತ್ತಿದೆ. ಸದ್ಯಕ್ಕೆ ರಾಜ್ಯ ಮತ್ತು ಕೇಂದ್ರದಲ್ಲಿ ಅಧಿವೇಶನ ನಡೆಯುತ್ತಿದೆ. ಸದ್ಯಕ್ಕೆ ಯಾವುದೇ ಗೊಂದಲಗಳು ಬೇಡ ಎಂದು ಹೈಕಮಾಂಡ್ ಸುಮ್ಮನಿರಲು ಸೂಚನೆ ನೀಡಿತ್ತು.
ಆದರೆ ಅಧಿವೇಶನದ ಬಳಿಕ ಮತ್ತೆ ಅಧಿಕಾರ ಹಂಚಿಕೆ ವಿಚಾರ ಚರ್ಚೆಗೆ ಬರುವುದು ಪಕ್ಕಾ ಎನ್ನಲಾಗಿದೆ. ಡಿಸೆಂಬರ್ 19 ರ ಬಳಿಕ ಚರ್ಚೆ ಮಾಡೋಣ ಎಂದು ಮಲ್ಲಿಕಾರ್ಜುನ ಖರ್ಗೆ ಮೂಲಕ ಸೋನಿಯಾ ಗಾಂಧಿ ಸಂದೇಶ ರವಾನಿಸಿದ್ದಾರೆ ಎನ್ನಲಾಗುತ್ತಿದೆ. ಅಧಿವೇಶನದ ಸಂದರ್ಭದಲ್ಲಿ ಯಾವುದೇ ಗೊಂದಲ ಬೇಡ ಎಂಬ ಸಂದೇಶ ಹೈಕಮಾಂಡ್ ನಿಂದ ಬಂದಿದೆ. ಈ ಕಾರಣಕ್ಕೆ ಸದ್ಯಕ್ಕೆ ಅಧಿಕಾರ ಹಂಚಿಕೆ ವಿಚಾರ ತಣ್ಣಗಾಗಿದೆ. ಅಧಿವೇಶನ ಮುಗಿದ ಬಳಿಕ ಸಿಎಂ ಮತ್ತು ಡಿಸಿಎಂರನ್ನು ದೆಹಲಿಗೆ ಕರೆಸುವ ಸಾಧ್ಯತೆಯಿದೆ.