Select Your Language

Notifications

webdunia
webdunia
webdunia
webdunia

ಸಚಿವ ರಮಾನಾಥ್ ರೈ ವಿರುದ್ಧ ಮಂಗಳೂರು ಕೋರ್ಟ್`ನಲ್ಲಿ ದೂರು ದಾಖಲು

ಸಚಿವ ರಮಾನಾಥ್ ರೈ ವಿರುದ್ಧ ಮಂಗಳೂರು ಕೋರ್ಟ್`ನಲ್ಲಿ ದೂರು ದಾಖಲು
ಮಂಗಳೂರು , ಮಂಗಳವಾರ, 26 ಸೆಪ್ಟಂಬರ್ 2017 (13:39 IST)
ಕಾಂಗ್ರೆಸ್ ಸಮಾವೇಶದಲ್ಲಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಅವಹೇಳನಕಾರಿ ಪದ ಬಳಕೆ ಆರೋಪದಡಿ ಅರಣ್ಯ ಸಚಿವ ರಮಾನಾಥ್ ರೈ ವಿರುದ್ಧ ಮಂಗಳೂರು ಕೋರ್ಟ್`ಗೆ ದೂರು ನೀಡಲಾಗಿದೆ.

ಉದ್ದೇಶಪೂರ್ವಕವಾಗಿಯೇ ಸಚಿವರು ಮಾನಹಾನಿಕರ ಪದ ಬಳಕೆ ಮಾಡಿದ್ದಾರೆಂದು ಆರೋಪಿಸಿ ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾದ ರಹೀಂ ಉಚ್ಚಿಲ್ ದೂರು ದಾಖಲಿಸಿದ್ದಾರೆ. ಸೆಪ್ಟೆಂಬರ್ 22ರಂದು ಉಳ್ಳಾಲದ ಹಸೈಗೊಳಿಯಲ್ಲಿ ನಡೆದಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಚಕ್ರವರ್ತಿ ಸೂಲಿಬೆಲೆ ಹೆಸರು ಹೇಳುವ ಸಂದರ್ಭ ಅವಹೇಳನಕಾರಿ ಪದ ಬಳಸಿದ್ದಾರೆ ಎಂದು ದೂರು ನೀಡಲಾಗಿದೆ.

ಮಾಧ್ಯಮಗಳ ಜೊತೆ ಮಾತನಾಡಿರುವ ದೂರುದಾರ ರಹೀಂ ಉಚ್ಚಿಲ್, ನ್ಯಾಯಾಧೀಶರು ನಮ್ಮ ದುರನ್ನ ಆಲಿಸಿದ್ದು, ನಾಳೆಗೆ ವಿಚಾರಣೆ ಮುಂದೂಡಿದ್ದಾರೆ. ಅವಹೇಳನದ ವಿಡಿಯೋವನ್ನ ಕೋರ್ಟ್`ಗೆ ನೀಡಿದ್ದೇನೆ. ಸಚಿವರಿಗೆ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಯ ಮರ್ಮಾಂಗದ ಮೇಲೆ ಇಸ್ತ್ರಿಪೆಟ್ಟಿಗೆ ಇಟ್ಟು ಕಿರುಕುಳ ಕೊಟ್ಟ ಪತಿ