Select Your Language

Notifications

webdunia
webdunia
webdunia
webdunia

ಪತ್ನಿಯ ಮರ್ಮಾಂಗದ ಮೇಲೆ ಇಸ್ತ್ರಿಪೆಟ್ಟಿಗೆ ಇಟ್ಟು ಕಿರುಕುಳ ಕೊಟ್ಟ ಪತಿ

ಪತ್ನಿ
ಪತ್ನಿಯ ಮರ್ಮಾಂಗದ ಮೇಲೆ ಇಸ್ತ್ರಿಪೆಟ್ಟಿಗೆ ಇಟ್ಟು ಕಿರುಕುಳ ಕೊಟ್ಟ ಪತಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಕುಡಿದ ಮತ್ತಿನಲ್ಲಿ ಮನೆಗೆ ಬಂದ ಪತಿ ದಿಲೀಪ್, ಪತ್ನಿಗೆ ವರದಕ್ಷಿಣೆ ತರುವಂತೆ ಕಿರುಕುಳ ನೀಡಿ ಇಸ್ತ್ರಿಪೆಟ್ಟಿಗೆಯ ವೈರ್‌ನಿಂದ ಹಲ್ಲೆ ಮಾಡಿದ್ದಾನೆ. ನಂತರ ಇಸ್ತ್ರಿಪೆಟ್ಟಿಗೆಯನ್ನು ಕಾಯಿಸಿ ಪತ್ನಿಯ ಮರ್ಮಾಂಗ ಮೇಲಿರಿಸಿ ಕ್ರೂರತೆಯನ್ನು ಮೆರೆದಿದ್ದಾನೆ.
 
ಜಾನಕಿ ರಾಮ್ ಲೇಔಟ್‌ ನಿವಾಸಿಯಾಗಿರುವ ದಿಲೀಪ್‌ಕುಮಾರ್ ಪತ್ನಿಯ ತಲೆಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ವರದಕ್ಷಿಣೆ ಒಡುವೆ ತರದಿದ್ದಲ್ಲಿ ಹತ್ಯೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದ ಎಂದು ಪತ್ನಿ ದೂರಿನಲ್ಲಿ ತಿಳಿಸಿದ್ದಾಳೆ.  

ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪತ್ನಿ, ಪತಿಯ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನ ಅನ್ವಯ ಪೊಲೀಸರು ಆರೋಪಿ ಪತಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಗಂಭೀರವಾಗಿ ಗಾಯಗೊಂಡಿರುವ ಪತ್ನಿ, ಸದ್ಯ ಅಂಬೇಡ್ಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ತೇರದಾಳ ವಿಧಾನಸಭಾ ಕ್ಷೇತ್ರ: ಸಚಿವೆ ಉಮಾಶ್ರಿ ವಿರುದ್ಧ ಬಿಎಸ್‌ವೈ ಸ್ಪರ್ಧೆ ಸಾಧ್ಯತೆ