Publish Date: Wed, 18 Jan 2023 (21:27 IST)
Updated Date: Wed, 18 Jan 2023 (21:28 IST)
ಪುನೀತ್ ರಾಜ್ ಕುಮಾರ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಯುವಕನ ವಿರುದ್ದ ದೂರು ನೀಡಲಾಗಿದೆ.ಕಮಿಷನರ್ ಕಚೇರಿಗೆ ಪುನೀತ್ ಅಭಿಮಾನಿ ಚೇತನ ಲೋಕೇಶ್ ಎಂಬುವವರು ದೂರು ನೀಡಿದ್ದಾರೆ.ಪ್ರವೀಣ್ ಎಂಬ ಯುವಕನ ವಿರುದ್ಧ ದೂರು ನೀಡಿದ್ದಾರೆ.
ಫೇಸ್ ಬುಕ್ ನಲ್ಲಿ ಫೇಕ್ ಐ.ಡಿ ಕ್ರಿಯೇಟ್ ಮಾಡಿ ಪುನೀತ್ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನ ಆರೋಪಿ ನೀಡಿದ್ದು,ಅವಾಚ್ಯ ಶಬ್ದಗಳಿಂದ ಪುನೀತ್ ರನ್ನ ನಿಂದಿಸಿ ವಿಡಿಯೋ ಶೇರ್ ಮಾಡಿದ್ದಾನೆ.ಈ ಸಂಬಂಧ ಪ್ರವೀಣ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಗಡಿ ರಸ್ತೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಅಲ್ಲದೇ ಕಮಿಷನರ್ ಪ್ರತಾಪ್ ರೆಡ್ಡಿಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.