Select Your Language

Notifications

webdunia
webdunia
webdunia
webdunia

ದಲಿತರ ನಡೆ, ಕಾಂಗ್ರೆಸ್ ಕಡೆ ದಲಿತ ಸಮುದಾಯ ಜಾಗೃತಿ ಅಭಿಯಾನ-ಆರ್.ಧರ್ಮಸೇನ

ದಲಿತರ ನಡೆ, ಕಾಂಗ್ರೆಸ್ ಕಡೆ ದಲಿತ ಸಮುದಾಯ ಜಾಗೃತಿ ಅಭಿಯಾನ-ಆರ್.ಧರ್ಮಸೇನ
bangalore , ಬುಧವಾರ, 18 ಜನವರಿ 2023 (20:31 IST)
ಕಾಂಗ್ರೆಸ್ ಭವನ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ, ಪರಿಶಿಷ್ಠ ಜಾತಿ ವಿಭಾಗದ ವತಿಯಿಂದ ಅಧ್ಯಕ್ಷರಾದ ಆರ್.ಧರ್ಮಸೇನರವರು ಆನೇಕಲ್ ಶಾಸಕರಾದ ಬಿ.ಶಿವಣ್ಣರವರು ಶಿಫಾರಸ್ಸಿನ ಮೇರೆಗೆ ಪಟಾಪಟ್ ನಾಗರಾಜ್,ಎಂ.ಶಂಭಪ್ಪ,ಜಗ್ನನಾಥ್  ರವರನ್ನು ಪರಿಶಿಷ್ಠ ಜಾತಿ ವಿಭಾಗಕ್ಕೆ ರಾಜ್ಯ ಸಂಚಾಲಕರಾಗಿ ನೇಮಕಾತಿ ಆದೇಶ ನೀಡಿದರು .ಅತ್ತಿಬೆಲೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ರಘುಪತಿ ರೆಡ್ಡಿ, ನೆರಳೂರು ಗ್ರಾಮ ಪಂಚಾಯಿತಿ ಸದಸ್ಯರಾದ ನವೀನ್ ಗೌಡರವರು ಉಪಸ್ಥಿತರಿದ್ದರು.                                                                                                                                                                                                                                                    
                                               
ಅಧ್ಯಕ್ಷರಾದ ಧರ್ಮಸೇನರವರು ಮಾತನಾಡಿ ಕಾಂಗ್ರೆಸ್ ಪಕ್ಷ ದಲಿತ ಸಮುದಾಯದಕ್ಕೆ ಬಹುಡೊಡ್ಡ ಅವಕಾಶಗಳನ್ನು ನೀಡಿದೆ.ಮಲ್ಲಿಕಾರ್ಜುನ್ ಖರ್ಗೆರವರು ಎ.ಐ.ಸಿ.ಸಿ.ಅಧ್ಯಕ್ಷರಾಗಿ ನೇಮಕ ಮಾಡಿದ್ದಾರೆ.ಜಿ.ಪರಮೇಶ್ವರ್,ಮುನಿಯಪ್ಪರವರು ನೂರಾರು ದಲಿತ ಮುಖಂಡರು ಕಾಂಗ್ರೆಸ್ ಪಕ್ಷದಲ್ಲಿ ಜನರ ಸೇವೆಗೆ ಸತತ ಪರಿಶ್ರಮ ಹಾಕುತ್ತಿದ್ದಾರೆ.
 
ಕೆ.ಪಿ.ಸಿ.ಸಿ.ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರ ನೇತೃತ್ವದಲ್ಲಿ ದಲಿತರ ನಡೆ, ಕಾಂಗ್ರೆಸ್ ಪಕ್ಷದ ಕಡೆ
ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ದೇಶ ಮತ್ತು ರಾಜ್ಯದಲ್ಲಿ ಬಿ.ಜೆ.ಪಿ.ಸರ್ಕಾರದ ಜನವಿರೋಧಿ, ದುರಾಡಳಿತದಿಂದ ಜನರು ಬೇಸತ್ತು ಹೋಗಿದ್ದಾರೆ.ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 140ಕ್ಷೇತ್ರಗಳಲ್ಲಿ ಬಹುಮತ ಪಡೆದು ಅಧಿಕಾರ ಚುಕ್ಕಾಣಿ  ಹಿಡಿಯಲಿದೆ ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯುತ್‌ ತಂತಿ ತಗಲಿ ಬಾಲಕ ಸಾವು