Select Your Language

Notifications

webdunia
webdunia
webdunia
webdunia

ತೇಜಸ್ವಿ ಸೂರ್ಯ ವಿರುದ್ಧ ವಾಗ್ದಾಳಿ ನಡೆಸಿದ ಡಾ.ಶಂಕರ ಗುಹಾ

ತೇಜಸ್ವಿ ಸೂರ್ಯ ವಿರುದ್ಧ ವಾಗ್ದಾಳಿ ನಡೆಸಿದ ಡಾ.ಶಂಕರ ಗುಹಾ
bangalore , ಬುಧವಾರ, 18 ಜನವರಿ 2023 (20:07 IST)
ಶ್ರೀ ರಾಘವೇಂದ್ರ ಕೋ ಆಪರೇಟಿವ್ ಸೊಸೈಟಿ ಹಾಗೂ ವಸಿಷ್ಠ ಬ್ಯಾಂಕ್ ಹಗರಣದ ತನಿಖೆ ಸರ್ಕಾರ ಸಿಬಿಐಗೆ ವಹಿಸಲು ತೀರ್ಮಾನಿಸಿರುವುದು ಸ್ವಾಗತ. ಎರಡೂವರೆ ವರ್ಷದ ಹೋರಾಟಕ್ಕೆ ಒಂದು ಹಂತದಲ್ಲಿ ಜಯ ಸಿಕ್ಕಿದೆ ಎಂದು ಶ್ರೀ ಗುರು ರಾಘವೇಂದ್ರ ಕೋ- ಆಪರೇಟಿವ್ ಬ್ಯಾಂಕ್ ಷೇರುದಾರರು ಮತ್ತು ಠೇವಣಿದಾರರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಡಾ.ಶಂಕರ ಗುಹಾ ಹೇಳಿದ್ದಾರೆ. ಈ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ನಿನ್ನೆ ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ರಾಘವೇಂದ್ರ ಬ್ಯಾಂಕ್ ಹಗರಣ ಜೊತೆ ವಸಿಷ್ಠ ಬ್ಯಾಂಕ್ ಹಗರಣವನ್ನು ಸಿಬಿಐ ತನಿಖೆಗೆ ನೀಡುವ ಬಗ್ಗೆ ತಿಳಿಸಿದ್ದಾರೆ. ಇದರ ಜೊತೆ 120 ಸೊಸೈಟಿಗಳು ಹಗರಣದಲ್ಲಿ ಸಿಲುಕಿದೆ. ಸೊಸೈಟಿ ಮಾಲೀಕರು ಲೋನ್ ಪಡೆದು ಪರಾರಿಯಾಗಿದ್ದು, ಬೇಲ್ ಮೇಲೆ ಹೊರಗಿದ್ದಾರೆ. ಕಣ್ವ ಬ್ಯಾಂಕ್ ಕೂಡ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು. ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕ ರವಿಸುಬ್ರಹ್ಮಣ್ಯ ನಾವೇ ದುಡ್ಡು ಕೊಡಿಸಿದೆವು ಅನ್ನೋ ರೀತಿ ಪ್ರಚಾರ ಮಾಡಿಕೊಂಡಿದ್ರು. 850 ಕೇಸ್ ತನಿಖೆಗೆ ಸಿಐಡಿಗೆ ಹೋಗಿದೆ: ನಮ್ಮ ದುಡ್ಡು ನಮಗೆ ಕೊಟ್ಟಿದ್ದಾರೆ, ಇದಕ್ಕೆ ಅವರಿಗೆ ಶಬ್ಬಾಶ್‌ ಗಿರಿ ಹೇಳಬೇಕಿಲ್ಲ. ಈ ಬಗ್ಗೆ ಇದುವರೆಗೂ ಇಬ್ಬರೂ ಯಾವುದೇ ಹೇಳಿಕೆ ನೀಡಿಲ್ಲ. ಸಿಬಿಐ ತನಿಖೆಯಿಂದ ಅವರಿಗೆ ಭಯ ಆಗಿದೆಯೋ ಏನೋ ಗೊತ್ತಿಲ್ಲ ಎಂದು ಟೀಕಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಆದಿಚುಂಚನಗಿರಿ ಮಠದ ಪರಮ ಭಕ್ತ:ನನ್ನ ಶ್ರೀಗಳ ನಡುವೆ ತಂದೆ,ಮಗನ ಸಂಬಂಧ-ಸಚಿವ ವಿ.ಸೋಮಣ್ಣ