ಡಿಸಿಎಂ ಡಾ.ಜಿ. ಪರಮೇಶ್ವರ್ ಹಾಗೂ ಬಿಜೆಪಿ ಶಾಸಕ ಎಸ್.ಎ. ರಾಮದಾಸ್ ವಿರುದ್ದ ದೂರು ದಾಖಲು

ಶುಕ್ರವಾರ, 26 ಅಕ್ಟೋಬರ್ 2018 (13:39 IST)
ಬಾಗಲಕೋಟೆ : ಜಮಖಂಡಿ ಉಪಚುನಾವಣೆ ಪ್ರಚಾರದ ವೇಳೆ ನೀತಿ ಸಂಹಿತೆ ಉಲ್ಲಂಘಿಸಿದ ಕಾರಣಕ್ಕೆ ಕಾಂಗ್ರೆಸ್ ನಾಯಕ ಡಿಸಿಎಂ ಡಾ.ಜಿ. ಪರಮೇಶ್ವರ್ ಹಾಗೂ ಬಿಜೆಪಿ ಶಾಸಕ ಎಸ್.ಎ. ರಾಮದಾಸ್ ವಿರುದ್ದ ಚುನಾವಣಾಧಿಕಾರಿ ದೂರು ದಾಖಲಿಸಿಕೊಂಡಿದ್ದಾರೆ.


ನೀತಿ ಸಂಹಿತೆ ಜಾರಿಯಲ್ಲಿರುವಾಗ ಯಾವುದೇ ಆಶ್ವಾಸನೆ, ಸರ್ಕಾರಿ ಯೋಜನೆ ಘೋಷಣೆ, ಉದ್ಘಾಟನೆ ಮಾಡುವಂತಿಲ್ಲ.ಆದರೆ ಡಿಸಿಎಂ ಡಾ.ಜಿ. ಪರಮೇಶ್ವರ್ ಅವರು, ಅ.23 ರಂದು ತಮ್ಮ ಪಕ್ಷದ ಅಧ್ಯರ್ಥಿ ಆನಂದ್ ನ್ಯಾಮಗೌಡ ಪರ ಜಮಖಂಡಿಯ ಸಾವಳಗಿಯಲ್ಲಿ ಪ್ರಚಾರ ಮಾಡುವಾಗ, ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿದ್ದರೆ ರಸ್ತೆಗೆ ಡಾಂಬರೀಕರಣ ಮಾಡ್ತೀವಿ ಎಂದು ಆಶ್ವಾಸನೆ ನೀಡಿದ್ದರು.


ಹಾಗೇ ಶಾಸಕ ಎಸ್.ಎ. ರಾಮದಾಸ್ ಅವರು ಬಿಜೆಪಿ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ ಪರವಾಗಿ  ಪ್ರಚಾರ ಮಾಡುವಾಗ ಗಾಯಕಿಯರನ್ನು ಸನ್ಮಾನಿಸುವ ನೆಪದಲ್ಲಿ ಹಣ ಹಂಚಿಕೆ ಮಾಡಿದ್ದರು. ಈ ಸಂಬಂಧ ರಾಮದಾಸ್ ವಿರುದ್ಧ ದೂರು ದಾಖಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಬ್ರಿಟಿಷರು ಇನ್ನೂ 100 ವರ್ಷ ಭಾರತವನ್ನು ಆಳಬೇಕಿತ್ತು ಎಂದು ಬಿಎಸ್ ಪಿ ನಾಯಕನ ಎಡವಟ್ಟು ಹೇಳಿಕೆ