ಬ್ರಿಟಿಷರು ಇನ್ನೂ 100 ವರ್ಷ ಭಾರತವನ್ನು ಆಳಬೇಕಿತ್ತು ಎಂದು ಬಿಎಸ್ ಪಿ ನಾಯಕನ ಎಡವಟ್ಟು ಹೇಳಿಕೆ

ಶುಕ್ರವಾರ, 26 ಅಕ್ಟೋಬರ್ 2018 (10:27 IST)
ನವದೆಹಲಿ: ಬ್ರಿಟಿಷರು ಭಾರತವನ್ನೂ ಇನ್ನೂ 100 ವರ್ಷ ಆಳಬೇಕಿತ್ತು. ಆಗ ಹಿಂದುಳಿದ ವರ್ಗಗಳ ಅಭಿವೃದ್ಧಿ ಆಗುತ್ತಿತ್ತು ಎಂಬ ಎಡವಟ್ಟು ಹೇಳಿಕೆಯನ್ನು ಬಿಎಸ್ ಪಿ ನಾಯಕ ಧರ್ಮವೀರ್ ಸಿಂಗ್ ಎಂಬವರು ನೀಡಿದ್ದಾರೆ.

ರಾಜಸ್ಥಾನದ ಬಿಎಸ್ ಪಿ ನಾಯಕ ಧರ್ಮವೀರ್ ಚುನಾವಣಾ ರ್ಯಾಲಿಯೊಂದರಲ್ಲಿ ಇಂತಹದ್ದೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಅಷ್ಟೇ ಅಲ್ಲದೆ, ಬ್ರಿಟಿಷರು ಬಿಆರ್ ಅಂಬೇಡ್ಕರ್ ಗೆ ಶಿಕ್ಷಣ ಪಡೆಯಲು ಅನುವು ಮಾಡಿಕೊಡದೇ ಇರುತ್ತಿದ್ದರೆ ಹಿಂದುಳಿದ ವರ್ಗದವರಿಗೆ ಅನುಕೂಲ ಮಾಡಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಬ್ರಿಟಿಷರು ಇಲ್ಲದೇ ಇದ್ದಿದ್ದರೆ ಅಂಬೇಡ್ಕರ್ ಗೆ ಯಾವುದೇ ಶಾಲೆಯಲ್ಲೂ ಸೀಟು ಸಿಗುತ್ತಿರಲಿಲ್ಲ ಎಂದೂ ಧರ್ಮವೀರ್ ನಾಲಿಗೆ ಹರಿಬಿಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕರಾವಳಿ ಹಿಂದುತ್ವದ ಲ್ಯಾಬೋರೇಟರಿ ಇದ್ದ ಹಾಗೆ: ಸಿದ್ದರಾಮಯ್ಯ