Publish Date: Mon, 08 Oct 2018 (09:36 IST)
Updated Date: Mon, 08 Oct 2018 (09:37 IST)
ನವದೆಹಲಿ: ಬಿಎಸ್ ಪಿ ನಾಯಕಿ ಮಾಯಾವತಿ ಅವರನ್ನು ಮುಂದಿನ ಪ್ರಧಾನಿ ಮಾಡಲು ಎಲ್ಲಾ ವಿಪಕ್ಷಗಳನ್ನು ಒಗ್ಗೂಡಿಸುತ್ತೇವೆ ಎಂದು ಹರ್ಯಾಣದ ಮಾಜಿ ಸಿಎಂ ಓಂ ಪ್ರಕಾಶ್ ಚೌಟಾಲಾ ಹೇಳಿದ್ದಾರೆ.
‘ಒಬ್ಬ ಬಡ ಕುಟುಂಬದ ಹೆಣ್ಣು ಮಗಳು ಮಾಯಾವತಿ ಪ್ರಧಾನಿಯಾಗಲು ನಾನು ಬಿಜೆಪಿ-ಕಾಂಗ್ರೆಸ್ಸೇತರ ಎಲ್ಲಾ ತೃತೀಯ ರಂಗದ ಪಕ್ಷಗಳನ್ನು ಒಗ್ಗೂಡಿಸಲು ಪ್ರಾಮಾಣಿಕ ಯತ್ನ ನಡೆಸುವೆ’ ಎಂದು ಕಾರ್ಯಕ್ರಮವೊಂದರಲ್ಲಿ ಚೌಟಾಲಾ ಹೇಳಿದ್ದಾರೆ.
ಐಎನ್ ಎಲ್ ಡಿ ಪಕ್ಷದ ನೇತಾರರಾಗಿರುವ ಓಂ ಪ್ರಕಾಶ್ ಚೌಟಾಲಾ ‘ನಾನು ಜೈಲಿಗೆ ಹೋಗಿದ್ದಾಗ ಕಾಂಗ್ರೆಸ್ ಕೂಡಾ ನಮ್ಮ ಪಕ್ಷದ ಕತೆ ಮುಗಿಯಿತು ಎಂದೇ ಅಂದುಕೊಂಡಿತ್ತು. ಆದರೆ ನನ್ನ ಪಕ್ಷದ ಕಾರ್ಯಕರ್ತರು ಪಕ್ಷವನ್ನು ಜೀವಂತವಾಗಿಟ್ಟರು’ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.