Select Your Language

Notifications

webdunia
webdunia
webdunia
webdunia

ಹಿಂದೂಗಳ ಭಾವನೆಗೆ ಧಕ್ಕೆ ತಂದ ಅಮೆಝೋನ್? ದೂರು ದಾಖಲು

ಅಮೆಝೋನ್
ಬೆಂಗಳೂರು: ಹಿಂದೂಗಳ ಆರಾಧ‍್ಯ ದೈವ ಶ್ರೀಕೃಷ್ಣ ಮತ್ತು ರಾಧೆಗೆ ಅವಮಾನ ಮಾಡಿದ್ದಾರೆಂಬ ವಿಚಾರಕ್ಕೆ ಸಂಬಂಧಿಸಿದಂತೆ ಆನ್ ಲೈನ್ ಮಾರುಕಟ್ಟೆ ದೈತ್ಯ ಅಮೆಝೋನ್ ವಿರುದ್ಧ ದೂರು ದಾಖಲಾಗಿದೆ.

ಬೆಂಗಳೂರಿನ ಸುಬ್ರಮಣ್ಯ ಪುರ ಪೊಲೀಸ್ ಠಾಣೆಯಲ್ಲಿ ಹಿಂದೂ ಜನಜಾಗೃತಿ ಸಮಿತಿ ದೂರು ದಾಖಲಿಸಿದೆ. ರಾಧೆ ಕೃಷ್ಣೆಯ ಅಶ್ಲೀಲ ಪೈಂಟಿಂಗ್ ನ್ನು ಮಾರಾಟಕ್ಕಿಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದರ ಬೆನ್ನಲ್ಲೇ ಅಮೆಝೋನ್ ವಿರುದ್ಧ ನೆಟ್ಟಿಗರಿಂದ ಆಕ್ರೋಶವೂ ಕೇಳಿಬಂದಿದೆ. ವಿವಾದದ ಬಳಿಕ ವೆಬ್ ಸೈಟ್ ನಿಂದ ಪೈಂಟಿಂಗ್ ನ್ನು ಕಿತ್ತು ಹಾಕಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತರಕಾರಿ ತರಲು ಹೇಳಿದ್ದಕ್ಕೆ ಹೆಂಡತಿಯ ಜುಟ್ಟು ಹಿಡಿದು ಥಳಿಸಿದ ಪತಿ