Select Your Language

Notifications

webdunia
webdunia
webdunia
webdunia

14 ದಿನಗಳ ಕಾಲ ಕ್ಲೋಸ್ ಆಗಲಿರುವ ಕಮರ್ಶಿಯಲ್ ಸ್ಟ್ರೀಟ್

14 ದಿನಗಳ ಕಾಲ ಕ್ಲೋಸ್ ಆಗಲಿರುವ ಕಮರ್ಶಿಯಲ್ ಸ್ಟ್ರೀಟ್
bangalore , ಭಾನುವಾರ, 12 ಸೆಪ್ಟಂಬರ್ 2021 (21:10 IST)
ಸಿಲಿಕಾನ್ ಸಿಟಿಯ ಪ್ರಮುಖ ಶಾಪಿಂಗ್ ಸೆಂಟರ್ ಗಳಲ್ಲಿ ಕಮರ್ಶಿಯಲ್ ಸ್ಟ್ರೀಟ್ ಕೂಡ ಒಂದು. ಪ್ರತಿನಿತ್ಯ ಸಾವಿರಾರು ಜನರು ಓಡಾಡುವ ಜನನಿಬಿಡ ಪ್ರದೇಶ ಇದ್ದಾಗಿದ್ದು . ಫ್ಯಾಷನ್ ಪ್ರೀಯರಿಗೆ ಹೇಳಿಮಾಡಿಸಿದ ಜಾಗ ಇದ್ದು .ಆದ್ರೆ ಈಗ ಕಮರ್ಶಿಯಲ್ ಸ್ಟ್ರೀಟ್ 14 ದಿನಗಳ ಕಾಲ ಕ್ಲೋಸ್ ಆಗಲಿದೆ .14 ದಿನಗಳ ಕಾಲ ಕ್ಲೋಸ್ ಆಗಲಿರುವ ಕಮರ್ಶೀಯಲ್ ಸ್ಟ್ರೀಟ್ .ಯೆಸ್ , ಪ್ಯಾಷನ್ ಪ್ರೀಯರ ನೆಚ್ಚಿನ ತಾಣವಾದ ಕಮರ್ಶಿಯಲ್ ಸ್ಟ್ರೀಟ್ 14 ದಿನಗಳ ರಸ್ತೆ ಕಾಮಗಾರಿಗಾಗಿ ಕ್ಲೋಸ್ ಆಗಲಿದೆ. ಕಮರ್ಶಿಯಲ್ ಸ್ಟ್ರೀಟ್ ನ ರಸ್ತೆ ಅವ್ಯವಸ್ಥೆಯಿಂದ ಕೂಡಿದ್ದು , ಈ ರಸ್ತೆಯ ಅಭಿವೃದ್ಧಿಗಾಗಿ 3.8 ಕೋಟಿ ಹಣ ಬಿಡುಗಡೆಯಾಗಿದೆ. ಆದ್ರು ರಸ್ತೆ ಕಾಮಗಾರಿ ತ್ವರಿತಗತಿಯಲ್ಲಿ ಆಗಿಲ್ಲ. ಇನ್ನೂ ಈ ಕಮರ್ಶಿಯಲ್ ಸ್ಟ್ರೀಟ್ ಗೆ ಈ ಹಿಂದೆ ಅಧಿಕಾರಿಗಳು ಬಂದು ಪರಿಶೀಲನೆ ಕಾರ್ಯ ನಡೆಸಿದ್ದಾರೆ. ರಸ್ತೆ ಕಾಮಗಾರಿ ಮಾಡುವುದಾಗಿ ಹೇಳಿದ್ದಾರೆ.
 
ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ರಸ್ತೆ ಸರಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಯಡಿಯೂರಪ್ಪ ಅಧಿಕಾರವಾದಿಯಲ್ಲಿ ರಸ್ತೆ ಅಭಿವೃದ್ದಿಗಾಗಿ ಹಣ ಮಂಜೂರಾಗಿದೆ. ಇನ್ನೂ ಈ ರಸ್ತೆ ಧೂಲಿನಿಂದ ಕೂಡಿದ್ದು, ರಸ್ತೆ ಸರಿ ಇಲ್ಲದೆ ತಗ್ಗಿನಿಂದ ಕೂಡಿದೆ. ಈಗಾಗಲೇ ರಸ್ತೆ ಕಾಮಗಾರಿ ಅರ್ಧಬಾರ್ದ ಮಾಡಿದ್ದು , ರಸ್ತೆ ಕಾಮಗಾರಿ ಸರಿಯಾಗಿ ಮಾಡದ ಕಾರಣ ರಸ್ತೆ ಮಾಡಿದ ಕಂಟ್ರಾಕ್ಟರ್ ಗೆ 10% ದಂಡ ಸರ್ಕಾರ ವಿಧಿಸಿದೆ. ಈ ರಸ್ತೆಯಿಂದ ಅಂಗಡಿ - ಮಾಲೀಕರಿಗೆ , ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗಿದ್ದು, ಈಗ ರಸ್ತೆ ಮಾಡುವುದಕ್ಕಾಗಿ ರಸ್ತೆ ಕ್ಲೋಸ್ ಮಾಡುವುದರಿಂದ  ವ್ಯಾಪಾರ ಆಗುವುದಿಲ್ಲ, ಸಾಕಷ್ಟು ಸಮಸ್ಯೆಯಾಗಲಿದೆ ಎಂದು ವ್ಯಾಪಾರಿಯೊಬ್ಬರು ತಮ್ಮ ಆಳಲನ್ನ ತೋಡಿಕೊಂಡ್ರು.ಇನ್ನೂ 1.2 ರಿಂದ 3.2 ಕೋಟಿ ಬಜೆಟ್ ಒಳಗೆ ರಸ್ತೆ ಕಾಮಗಾರಿ ಮುಗಿಸಬೇಕು. ಈಗಾಗಲೇ ರಸ್ತೆ ಕಾಮಗಾರಿಗಾಗಿ ಹಣ ಬಿಡುಗಡೆಯಾಗಿದ್ದು, 14 ದಿನಗಳ ಒಳಗೆ ರಸ್ತೆ ಕಾಮಗಾರಿಯಾಗಬೇಕೆಂದು ಸರ್ಕಾರ ಆದೇಶಿಸಿದೆ. ಹೀಗಾಗಿ ಸೋಮವಾರದ ಸಂಜೆಯಿಂದಲ್ಲೇ ರಸ್ತೆ ಕ್ಲೋಸ್ ಆಗಲಿದೆ. ಇನ್ನೂ ರಸ್ತೆ ಕ್ಲೋಸ್ ಆಗುವುದರಿಂದ ಎಷ್ಟು ಸಮಸ್ಯೆಯಾಗಲಿದೆ .ಒಟ್ನಲಿ‌ ರಸ್ತೆ ಏನೋ ಕ್ಲೋಸ್ ಮಾಡಲಿದ್ದಾರೆ ಅದಕ್ಕೆ ತಕ್ಕಂತೆ  ಕಾಮಗಾರಿಗಳು ತ್ವರಿತಗತಿಯಲ್ಲಿ ಆದ್ರೆ ಜನರಿಗೆ ಅನುಕೂಲವಾಗಲಿದೆ
[20:58, 9/12/2021] Geethanjali: ಸ್ಯಾಂಕಿ ಕೆರೆ ಬಳಿ ಗಣೇಶ ವಿಸರ್ಜನೆ ಜೋರಾಗಿತ್ತು.ಗಣೇಶ ಮೂರ್ತಿ ವಿಸರ್ಜನೆಗೆ  ನೂರಾರು ಜನ ಬಂದು ಕೆರೆಯ ಕಲ್ಯಾಣಿ ಬಳಿ ಸಿಸಿಟಿವಿ,ಲೈಟ್, ಸ್ಯಾನಿಟೈಸಿಂಗ್, ಥರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆ ಮಾಡಿದ್ದಾರೆ.ಇಂದು 6500 ಕ್ಕೂ ಹೆಚ್ಚು ಗಣೇಶ ಮೂರ್ತಿಗಳ ವಿಸರ್ಜನೆ ಮಾಡಿದ್ದಾರೆ. ಇನ್ನೂ ವಿಸರ್ಜನೆ ಸ್ಥಳದಲ್ಲಿಪೊಲೀಸ್ ಸಿಬ್ಬಂದಿ, ಮಾರ್ಷಲ್ಸ್ , ಬಿಬಿಎಂಪಿ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.4 ಅಡಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಮಾತ್ರ ಅವಕಾಶ ಇದೆ.ಆದ್ರೆ ಪಿಒಪಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಅವಕಾಶವಿಲ್ಲ

Share this Story:

Follow Webdunia kannada

ಮುಂದಿನ ಸುದ್ದಿ

ಸ್ಯಾಂಕಿ ಕೆರೆ ಬಳಿ ಗಣೇಶ ವಿಸರ್ಜನೆ ಜೋರು