Select Your Language

Notifications

webdunia
webdunia
webdunia
Sunday, 13 April 2025
webdunia

ಕ್ವಾರಂಟೈನ್ ಅವಧಿಯಲ್ಲಿ ಸಿಎಂ ಬಿಎಸ್ ವೈ ದಿನಚರಿ ಏನು ಗೊತ್ತಾ? ವೈರಲ್ ಆಯ್ತು ಫೋಟೋ

ಸಿಎಂ ಯಡಿಯೂರಪ್ಪ
ಬೆಂಗಳೂರು , ಸೋಮವಾರ, 13 ಜುಲೈ 2020 (10:11 IST)
ಬೆಂಗಳೂರು: ಐದು ದಿನಗಳ ಸ್ವಯಂ ಕ್ವಾರಂಟೈನ್ ಗೊಳಗಾಗಿರುವ ಸಿಎಂ ಯಡಿಯೂರಪ್ಪ ಈ ಬಿಡುವಿನ ವೇಳೆಯಲ್ಲಿ ಏನು ಮಾಡುತ್ತಿದ್ದಾರೆ ಗೊತ್ತಾ? ಅವರ ಸೋಷಿಯಲ್ ಮೀಡಿಯಾ ಪುಟದಲ್ಲಿ ಪ್ರಕಟಗೊಂಡ ಫೋಟೋವೊಂದು ಈಗ ವೈರಲ್ ಆಗಿದೆ.


ಸದಾ ರಾಜಕೀಯ ವಿಚಾರಗಳಲ್ಲೇ ಮುಳುಗಿ ಹೋಗಿರುವ ಸಿಎಂ ಈಗ ತಮಗೆ ಸಿಕ್ಕ ಬಿಡುವಿನ ವೇಳೆಯನ್ನು ಸದುಪಯೋಗಪಡಿಸಿಕೊಂಡಿದ್ದಾರೆ. ಬಿಡುವಿನ ವೇಳೆಯಲ್ಲಿ ‘ಯಯಾತಿ’ ಪುಸ್ತಕ ಹಿಡಿದು ಕೂತಿರುವ ಯಡಿಯೂರಪ್ಪ ‘ಬಿಡುವಿನ ವೇಳೆಯಲ್ಲಿ ನನಗೆ ಅತ್ಯಂತ ಪ್ರಿಯವಾದ ಕಾಲಕ್ಷೇಪವೆಂದರೆ ಪುಸ್ತಕ ಓದುವುದು.

ನೂರಾರು ಸಂಗತಿಗಳ ಬಗ್ಗೆ ತಿಳಿದಷ್ಟೂ ತಿಳಿಯಬಹುದಾದ ವಿಷಯಗಳಿಗೆ, ಜ್ಞಾನಾರ್ಜನೆ ಎಂದಿಗೂ ಮುಗಿದಯ ಕಾಯಕ. ಇಂದಿನ ಲಾಕ್ ಡೌನ್ ಮತ್ತು ಕ್ವಾರಂಟೈನ್ ಅವಧಿಯಲ್ಲಿ ಸಿಕ್ಕ ಬಿಡುವಿನ ವೇಳೆಯಲ್ಲಿ ಖಾಂಡೇಕರ್ ಅವರ ಯಯಾತಿಯ ಜತೆಗೆ ಕಾಲ ಕಳೆಯುತ್ತಿದ್ದೇನೆ’ ಎಂದು ಟ್ವೀಟ್ ಮಾಡಿದ್ದಾರೆ. ಅವರ ಈ ಫೋಟೋ ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನಿಂದ ಶೀಘ್ರದಲ್ಲಿಯೇ ಕೊರೊನಾ ರಿಪೋರ್ಟ್ ನೀಡುವ ಆ್ಯಂಟಿಜೆನ್ ಟೆಸ್ಟ್ ಆರಂಭ