Select Your Language

Notifications

webdunia
webdunia
webdunia
webdunia

ಇಂದಿನಿಂದ ಶೀಘ್ರದಲ್ಲಿಯೇ ಕೊರೊನಾ ರಿಪೋರ್ಟ್ ನೀಡುವ ಆ್ಯಂಟಿಜೆನ್ ಟೆಸ್ಟ್ ಆರಂಭ

ಇಂದಿನಿಂದ ಶೀಘ್ರದಲ್ಲಿಯೇ ಕೊರೊನಾ ರಿಪೋರ್ಟ್ ನೀಡುವ ಆ್ಯಂಟಿಜೆನ್ ಟೆಸ್ಟ್ ಆರಂಭ
ಬೆಂಗಳೂರು , ಸೋಮವಾರ, 13 ಜುಲೈ 2020 (10:07 IST)
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಇಂದಿನಿಂದ ಶೀಘ್ರದಲ್ಲಿಯೇ ರಿಪೋರ್ಟ್ ನೀಡುವ ಆ್ಯಂಟಿಜೆನ್ ಟೆಸ್ಟ್ ಆರಂಭವಾಗಲಿದೆ.

ಆ್ಯಂಟಿಜೆನ್ ಟೆಸ್ಟ್ ನಿಂದ  15-30 ನಿಮಿಷದಲ್ಲೇ ಕೋವಿಡ್ ರಿಪೋರ್ಟ್ ಸಿಗಲಿದೆ. ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಬೆಂಗಳೂರಲ್ಲೇ 50 ಸಾವಿರ ಟೆಸ್ಟ್ ಗೆ  ತೀರ್ಮಾನ ಮಾಡಲಾಗಿದೆ.

ಹಾಗೇ  ಬೆಂಗಳೂರು ಸೇರಿ ಇತರೆ ಜಿಲ್ಲೆಗಳಲ್ಲಿ ಈ ಟೆಸ್ಟ್ ನಡೆಸಲಾಗುವುದು. ಕೊರೊನಾ ಕೇಸ್ ಹೆಚ್ಚಿರುವ ಪ್ರದೇಶಗಳು ಹಾಗೂ  ಕಂಟೈನ್ಮೆಂಟ್ ಝೋನ್ ನಲ್ಲಿ ಆ್ಯಂಟಿಜೆನ್ ಟೆಸ್ಟ್ ಬಳಸಲಾಗುವುದು ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಡಿಸಿಗಳ ಜೊತೆ ಸಿಎಂ ವಿಡಿಯೋ ಕಾನ್ಫರೆನ್ಸ್