Select Your Language

Notifications

webdunia
webdunia
webdunia
webdunia

ಸಿಎಂ ಪರಿಹಾರ ನಿಧಿಯಿಂದ ಕೊರೋನಾಗೆ ಇದುವರೆಗೆ ಖರ್ಚಾಗಿದ್ದು ಎಷ್ಟು ಗೊತ್ತಾ?

ಸಿಎಂ ಪರಿಹಾರ ನಿಧಿಯಿಂದ ಕೊರೋನಾಗೆ ಇದುವರೆಗೆ ಖರ್ಚಾಗಿದ್ದು ಎಷ್ಟು ಗೊತ್ತಾ?
ಬೆಂಗಳೂರು , ಶನಿವಾರ, 4 ಜುಲೈ 2020 (11:20 IST)
ಬೆಂಗಳೂರು: ಕೊರೋನಾ ರೋಗದ ವಿರುದ್ಧ ಹೋರಾಡಲು ಅನೇಕರು ಕರ್ನಾಟಕ ರಾಜ್ಯ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಮ್ಮಿಂದಾದಷ್ಟು ದೇಣಿಗೆ ನೀಡಿದ್ದರು. ಈ ಪೈಕಿ ಎಷ್ಟು ಹಣ ಕೊರೋನಾಗಾಗಿ ಖರ್ಚಾಗಿದೆ ಗೊತ್ತಾ?

 

ಜನರು ನೀಡಿದ ದೇಣಿಗೆಯಿಂದ ಇದುವರೆಗೆ ಸುಮಾರು 334.50 ಕೋಟಿ ರೂ. ಸಂಗ್ರಹವಾಗಿದೆ. ಈ ಪೈಕಿ 140.72 ಕೋಟಿ ರೂ. ಇದುವರೆಗೆ ವೆಚ್ಚ ಮಾಡಲಾಗಿದೆ ಎಂದು ಸಿಎಂ ಕಚೇರಿ ಮಾಹಿತಿ ನೀಡಿದೆ. ಇತ್ತೀಚೆಗಷ್ಟೇ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಸರ್ಕಾರ ಕೊರೋನಾಗೆ ಸಂಗ್ರಹವಾದ ಹಣದಿಂದ ನಯಾ ಪೈಸೆ ಖರ್ಚು ಮಾಡಿಲ್ಲ ಎಂದು ಆರೋಪಿಸಿದ್ದರು. ಈ ಹಿನ್ನಲೆಯಲ್ಲಿ ಸಿಎಂ ಕಚೇರಿ ಈ ಮಾಹಿತಿ ಬಹಿರಂಗಪಡಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಲ್ಲಿಗೆ ಗಿಡ ಬೇಗ ಹೂ ಬಿಡಲು ಈ ಟ್ರಿಕ್ಸ್ ಫಾಲೋ ಮಾಡಿ