Publish Date: Sat, 04 Jul 2020 (10:00 IST)
Updated Date: Sat, 04 Jul 2020 (10:02 IST)
ಬೆಂಗಳೂರು: ಅಣ್ಣ ಚಿರಂಜೀವಿ ಸರ್ಜಾ ಸಾವಿನ ದುಃಖದಲ್ಲಿರುವ ಧ್ರುವ ಸರ್ಜಾ ಲೋ ಬಿಪಿ ಸಮಸ್ಯೆಯಿಂದ ಆಸ್ಪತ್ರೆ ಸೇರಿದ್ದಾರೆ ಎಂಬ ವದಂತಿ ಹಬ್ಬಿತ್ತು. ಆದರೆ ಅವರು ಸದ್ಯಕ್ಕೆ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.
ಅಣ್ಣನ ಅಕಾಲಿಕ ಮರಣದಿಂದಾಗಿ ನೋವಿನಲ್ಲಿರುವ ಧ್ರುವ ಕೊಂಚ ಅಸ್ವಸ್ಥರಾಗಿದ್ದು ನಿಜ. ಆದರೆ ಈಗ ಆರೋಗ್ಯವಾಗಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಅವರು ಹೊರಗಡೆ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಮನೆಯಲ್ಲಿಯೇ ಕುಟುಂಬದ ಜತೆ ಕಾಲ ಕಳೆಯುತ್ತಿದ್ದಾರೆ.