Select Your Language

Notifications

webdunia
webdunia
webdunia
webdunia

ಕೊನೆಗೂ ರಚಿತಾ ರಾಮ್ ಹುಡುಕುತ್ತಿದ್ದ ಆ ಅಭಿಮಾನಿ ಸಿಕ್ಕೇ ಬಿಟ್ರು!

ಕೊನೆಗೂ ರಚಿತಾ ರಾಮ್ ಹುಡುಕುತ್ತಿದ್ದ ಆ ಅಭಿಮಾನಿ ಸಿಕ್ಕೇ ಬಿಟ್ರು!
ಬೆಂಗಳೂರು , ಶನಿವಾರ, 4 ಜುಲೈ 2020 (09:17 IST)
ಬೆಂಗಳೂರು: ಡಿಂಪಲ್ ಕ್ವೀನ್ ರಚಿತಾ ರಾಮ್ ತಮ್ಮ ಮನೆ ಬಳಿ ಆಟೋ ತೆಗೆದುಕೊಂಡು ಬಂದು ಸಹಿ ಹಾಕಿಸಿಕೊಂಡು ಹೋದ ಅಭಿಮಾನಿಗಾಗಿ ಹುಡುಕಾಟ ನಡೆಸಿದ್ದರು. ಆ ಅಭಿಮಾನಿ ಈಗ ಕೊನೆಗೂ ಪತ್ತೆಯಾಗಿದ್ದಾರೆ.


ರಚಿತಾ ಇನ್ ಸ್ಟಾಗ್ರಾಂನಲ್ಲಿ ಸುದೀರ್ಘ ಸಂದೇಶ ಬರೆದು ಆ ವ್ಯಕ್ತಿಯ ವಿವರ ತಿಳಿದುಕೊಳ್ಳಲು ನನಗೆ ಸಾಧ‍್ಯವಾಗಿಲ್ಲ. ಹೀಗಾಗಿ ಈ ಪೋಸ್ಟ್ ನೋಡಿ ಆ ವ್ಯಕ್ತಿ ಯಾರು ಎಂದು ತಿಳಿದುಕೊಳ್ಳಲು ಎಲ್ಲರೂ ಸಹಾಯ ಮಾಡಿ ಎಂದು ಕೋರಿದ್ದರು.

ಅದರಂತೆ ರಚಿತಾ ಅಭಿಮಾನಿ ಬಳಗವೊಂದರಲ್ಲಿ ಫೋಟೋ ನೋಡಿ ಆ ಅಭಿಮಾನಿ ಇದು ನನ್ನದೇ ಆಟೋ ಎಂದು ಪರಿಚಯಿಸಿಕೊಂಡಿದ್ದಾರೆ. ಅಂತೂ ರಚಿತಾ ಹುಡುಕುತ್ತಿದ್ದ ಅಭಿಮಾನಿ ಶರಣ್ ಸೂರ್ಯ ಎಂಬವರಾಗಿದ್ದು, ಕೊನೆಗೂ ಪತ್ತೆಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಮ್ಮ ಮನೆ ಹತ್ರ ಬರಬೇಡಿ ಎಂದು ಖಡಕ್ ಆಗಿ ಸೂಚಿಸಿದ ಶಿವರಾಜಕುಮಾರ್