Select Your Language

Notifications

webdunia
webdunia
webdunia
webdunia

ನಾಳೆ 108‘ನಮ್ಮ ಕ್ಲಿನಿಕ್‌’ಗೆ ಸಿಎಂ ಚಾಲನೆ

ನಾಳೆ 108‘ನಮ್ಮ ಕ್ಲಿನಿಕ್‌’ಗೆ ಸಿಎಂ ಚಾಲನೆ
ಬಿಬಿಎಂಪಿ ವ್ಯಾಪ್ತಿಯ 243 ವಾರ್ಡ್ಗಳ ಪೈಕಿ 108 ವಾರ್ಡ್ಗಳಲ್ಲಿ ಸ್ಥಾಪಿಸಲಾದ ‘ನಮ್ಮ ಕ್ಲಿನಿಕ್’ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಳೆ ಚಾಲನೆ ನೀಡಲಿದ್ದಾರೆ.ಇನ್ನು ಬಿಬಿಎಂಪಿಯ 243 ವಾರ್ಡ್ಗಳು ಸೇರಿದಂತೆ ರಾಜ್ಯದಲ್ಲಿ 438 ‘ನಮ್ಮ ಕ್ಲಿನಿಕ್’ ಆರಂಭಿಸುವುದಾಗಿ ರಾಜ್ಯ ಸರ್ಕಾರ ಕಳೆದ ಬಜೆಟ್ನಲ್ಲಿ ಘೋಷಿಸಿತ್ತು. ಅದರಂತೆ ರಾಜ್ಯದ ವಿವಿಧ ಜಿಲ್ಲೆಯಲ್ಲಿ 114 ನಮ್ಮ ಕ್ಲಿನಿಕ್ಗಳಿಗೆ ಕಳೆದ ಡಿಸೆಂಬರ್ನಲ್ಲಿ ಚಾಲನೆ ನೀಡಲಾಗಿತ್ತು. ಇದೀಗ ಬಿಬಿಎಂಪಿ ವ್ಯಾಪ್ತಿಯ 108 ನಮ್ಮ ಕ್ಲಿನಿಕ್ಗಳಿಗೆ ಮಂಗಳವಾರ ಚಾಲನೆ ದೊರೆಯಲಿದೆ. ಇನ್ನುಳಿದ ನಮ್ಮ ಕ್ಲಿನಿಕ್ಗಳಿಗೆ ಮುಂದಿನ ಹಂತದಲ್ಲಿ ಚಾಲನೆ ನೀಡುವುದಾಗಿ ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದು,ನಮ್ಮ ಕ್ಲಿನಿಕ್ಗಳು ಬೆಳಗ್ಗೆ 9 ಗಂಟೆಯಿಂದ ಸಂಜೆ 4.30 ರವರೆಗೆ ಕಾರ್ಯನಿರ್ವಹಿಸಲಿವೆ. ಉಚಿತ ತಪಾಸಣೆ ಮತ್ತು ಉಚಿತ ಔಷಧ ವಿತರಣೆ ಮಾಡಲಾಗುತ್ತದೆ. ಒಟ್ಟು 12 ತರಹದ ಆರೋಗ್ಯ ಸೇವೆಗಳು ಹಾಗೂ 14 ವಿಧದ ಪ್ರಯೋಗ ನಡೆಸಲಾಗುತ್ತದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಇ-ಸಂಜೀವಿನಿ ಹಾಗೂ ಟೆಲಿ ಕೌನ್ಸೆಲಿಂಗ್ ಮೂಲಕ ಕೊಡಿಸುವ ವ್ಯವಸ್ಥೆ ಸಹ ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆ ಆರ್ ಪುರ -ವೈಟ್ ಫೀಲ್ಡ್ ಮಾರ್ಗದಲ್ಲಿ ಮೆಟ್ರೋ ರೈಲಿನ ವೇಗದ ಪರೀಕ್ಷೆ