Select Your Language

Notifications

webdunia
webdunia
webdunia
webdunia

ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ

ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ
bangalore , ಸೋಮವಾರ, 6 ಫೆಬ್ರವರಿ 2023 (13:40 IST)
ನಗರದ ಮೈಸೂರು ಬ್ಯಾಂಕ್ ಸರ್ಕಲ್ ಮುಂಭಾಗ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಅಕ್ರೋಶ ಹೊರಹಾಕ್ತಿದ್ದಾರೆ.
 
ಎಲ್ ಐ ಸಿ ,ಸ್ಟೇಟ್ ಬ್ಯಾಂಕ್ ಇಂಡಿಯಾ ಈ ಎರಡು ಸಂಸ್ಥೆ ಗಳ ಮುಂದೆ ಪ್ರತಿಭಟನೆ ಮಾಡಲು ನಮಗೆ ಆದೇಶ ಬಂದಿತ್ತು.ಅದಕ್ಕೆ ಎಲ್ಲೇಲ್ಲಿ ಎಲ್ ಐ ಸಿ ಸ್ಟೇಟ್ ಬ್ಯಾಂಕ್ ಇದಾವೆ ಅಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ .ಎಲ್ ಐ ಸಿ ಅವರು ಅದಾನಿ ಗ್ರೂಪ್ ನಲ್ಲಿ 36 ಸಾವಿರ ಕೋಟಿ ಹೂಡಿಕೆ ಮಾಡಿದ್ದಾರೆ.ಇವೇರಡು ಸಂಸ್ಥೆಯಲ್ಲಿರುವ ಹಣ ಯಾರದು ಸಾರ್ವಜನಿಕರದ್ದು.ಹಿಡೆನ್ ಬರ್ಗ್ ವರದಿ ಪ್ರಕಾರ ಎಲ್ ಐ ಸಿ ಸಂಸ್ಥೆಗೆ 18 ಸಾವಿರ  ಕೋಟಿ ನಷ್ಟ ಆಗಿದೆ.೨೦೧೪ ರಿಂದ ಇಚಿಗೆ ೧೦ ಲಕ್ಷ ಕೋಟಿ 25 ಉದ್ಯಮಿಗಳ ಸಾಲ ಮನ್ನಾ ಮಾಡಿದ್ದಾರೆ.ಅದಾನಿಗೆ  ೧೦ ಲಕ್ಷ ಕೋಟಿ ನಷ್ಟ ಆಗಿದೆ ಅದು ಯಾರ ದುಡ್ಡು ಎಲ್ ಐ ಸಿ , ಸ್ಟೇಟ್ ಬ್ಯಾಂಕ್ ಹಣ ಇದರ ವಿರುದ್ದ ಪ್ರತಿಭಟನೆ ಮಾಡುತ್ತಿದ್ದೇವೆ .ಸುಪ್ರೀಂ ಕೋರ್ಟ್ ಹಾಲಿ ನ್ಯಾಯಮೂರ್ತಿ ಗಳ ನೇತೃತ್ವದಲ್ಲಿ ತನಿಖೆ ಆಗಬೇಕು.ಸಾರ್ವಜನಿಕರ ಹಣ ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಧರಣಿ ನಡೆಸುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಅದಾನಿ ವಿಚಾರದಲ್ಲಿ ತೀವ್ರವಾದ ಪ್ರತಿಪಕ್ಷಗಳ ಪ್ರತಿಭಟನೆ