Select Your Language

Notifications

webdunia
webdunia
webdunia
webdunia

ಮುಡಾ ಹೈಕೋರ್ಟ್ ತೀರ್ಪಿನಿಂದ ಸಿದ್ದರಾಮಯ್ಯ ಒಳಗೊಳಗೇ ಕಂಗಾಲು: ನಾಳೆಯೇ ರಾಜೀನಾಮೆ ಕೊಡ್ತಾರಾ

Siddaramaiah

Krishnaveni K

ಬೆಂಗಳೂರು , ಮಂಗಳವಾರ, 24 ಸೆಪ್ಟಂಬರ್ 2024 (14:55 IST)
ಬೆಂಗಳೂರು: ಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಸರಿ ಎಂದು ಹೈಕೋರ್ಟ್ ತೀರ್ಪು ನೀಡುತ್ತಿದ್ದಂತೇ ಇತ್ತ ಸಿದ್ದರಾಮಯ್ಯಗೆ ಒಳಗೊಳಗೇ ಟೆನ್ಷನ್ ಶುರುವಾಗಿದೆ. ಹೀಗಾಗಿ ನಾಳೆ ಬೆಳಿಗ್ಗೆ 10 ಗಂಟೆಗೆ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ.

ಸಿಎಂ ಸಿದ್ದರಾಮಯ್ಯ ವಿರುದ್ಧ ಹೈಕೋರ್ಟ್ ತೀರ್ಪು ಬರುತ್ತಿದ್ದಂತೇ ಇತ್ತ ವಿಪಕ್ಷ ಬಿಜೆಪಿಯಲ್ಲಿ ಉತ್ಸಾಹ ಗರಿಗೆದರಿದೆ. ಇದು ತಮ್ಮ ಮೈಸೂರು ಪಾದಯಾತ್ರೆಯ ಫಲ, ನಮ್ಮ ಹೋರಾಟಕ್ಕೆ ಸಂದ ಜಯ ಎಂದು ವಿಪಕ್ಷ ನಾಯಕರಾದ ಆರ್ ಅಶೋಕ್, ಬಿವೈ ವಿಜಯೇಂದ್ರ ಹೇಳುತ್ತಿದ್ದಾರೆ.

ಈ ತೀರ್ಪು ತಮ್ಮ ವಿರುದ್ಧ ಬಂದಿರುವುದಕ್ಕೆ ಸಿಎಂ ಸಿದ್ದರಾಮಯ್ಯಗೆ ಒಳಗೊಳಗೇ ಟೆನ್ಷನ್ ಶುರುವಾಗಿದೆ. ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದರಿಂದ ಈಗ ಸ್ವಪಕ್ಷೀಯರೇ ಅವರ ವಿರುದ್ಧ ತಿರುಗಿಬೀಳುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ ಸಿದ್ದರಾಮಯ್ಯಗೆ ತಮ್ಮ ಪಕ್ಷದ ಸಚಿವರು, ಶಾಸಕರ ಬೆಂಬಲ ಮುಖ್ಯ.

ಹೀಗಾಗಿ ನಾಳೆ 10 ಗಂಟೆಗೆ ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ಸಭೆ ಕರೆದಿದ್ದು, ತಮಗೆ ಬೆಂಬಲ ನೀಡುವಂತೆ ಕೋರಲಿದ್ದಾರೆ. ತಮ್ಮ ವಿರುದ್ಧ ಬಂದಿರುವ ತೀರ್ಪಿನ ಬಗ್ಗೆ ತಮ್ಮ ಸ್ವಪಕ್ಷೀಯ ನಿಲುವು ಏನು ಎಂಬುದು ಸಿಎಂಗೆ ಮುಖ್ಯವಾಗುತ್ತದೆ. ಈ ಕಾರಣಕ್ಕೆ ಎಲ್ಲಾ ಶಾಸಕ, ಸಚಿವರ ಬೆಂಬಲವನ್ನು ಅವರೀಗ ಎದುರು ನೋಡುತ್ತಿದ್ದಾರೆ.ಒಂದು  ವೇಳೆ ಅವರಿಗೆ ಶಾಸಕಾಂಗ ಸಭೆಯಲ್ಲಿ ಬೆಂಬಲ ಸಿಗದೇ ಇದ್ದರೆ ರಾಜೀನಾಮೆ ಕೊಡಬೇಕಾಗಿ ಬಂದರೂ ಅಚ್ಚರಿಯಿಲ್ಲ. ಹೀಗಾಗಿ ನಾಳೆಯ ಸಭೆ ಮಹತ್ವದ್ದಾಗಲಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಯಾರು ಏನಾದ್ರೂ ಮಾಡ್ಕೊಳ್ಳಿ ಸಿದ್ದರಾಮಯ್ಯ ರಾಜೀನಾಮೆ ನೀಡಲ್ಲ ಎಂದ ಡಿಕೆ ಶಿವಕುಮಾರ್