ಕುಂಬಮೇಳದಲ್ಲೂ ಕಾಲ್ತುಳಿತ ಆಗಿಲ್ವಾ ಎಂದ ಸಿದ್ದರಾಮಯ್ಯ: ಆಗ ನೀವು ಟೀಕಿಸಿಲ್ವಾ ಎಂದ ಪಬ್ಲಿಕ್

Krishnaveni K
ಗುರುವಾರ, 5 ಜೂನ್ 2025 (10:14 IST)
ಬೆಂಗಳೂರು: ಚಿನ್ನಸ್ವಾಮಿಯಲ್ಲಿ ನಡೆದ ಕಾಲ್ತುಳಿತದ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸುವಾಗ ಕುಂಬಮೇಳದಲ್ಲೂ ಆಗಿರ್ಲಿಲ್ವಾಅ ಎಂದಿದ್ದರು. ಇದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಆಗ ನೀವೂ ಟೀಕಿಸಿರಲಿಲ್ವಾ ಎಂದಿದ್ದಾರೆ.

ನಿನ್ನೆ ಚಿನ್ನಸ್ವಾಮಿಯಲ್ಲಿ ಸಂಭ್ರಮಾಚರಣೆ ವೇಳೆ ಅವ್ಯವಸ್ಥೆಯಿಂದಾಗಿ ಕಾಲ್ತುಳಿತವಾಗಿ 11 ಮಂದಿ ಸಾವನ್ನಪ್ಪಿದ್ದರು. ಘಟನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಧ್ಯಮಗೋಷ್ಠಿ ನಡೆಸಿದ್ದರು. ಈ ವೇಳೆ ಕಾಲ್ತುಳಿತ ದುರಂತದ ಬಗ್ಗೆ ಕಾರಣ ವಿವರಿಸಿದ್ದಾರೆ.

ಈ ವೇಳೆ ಇತ್ತೀಚೆಗೆ ಕುಂಬಮೇಳದಲ್ಲಿ ದುರಂತವಾಗಿಲ್ವಾ? ಕಾಲ್ತುಳಿತದಲ್ಲಿ ಜನ ಸಾವನ್ನಪ್ಪಿಲ್ವಾ? ಇದನ್ನು ನಾವು ಅಥವಾ ನಮ್ಮ ಪಕ್ಷದವರು ಏನಾದರೂ ಟೀಕೆ ಮಾಡಿದ್ವಾ ಎಂದು ಸಿದ್ದರಾಮಯ್ಯ ಪತ್ರಕರ್ತರಿಗೆ ತಿರುಗೇಟು ನೀಡಿದ್ದಾರೆ.

ಆದರೆ ಇದಕ್ಕೆ ಸಾರ್ವಜನಿಕರು ಪ್ರತಿಕ್ರಿಯಿಸಿದ್ದು, ಇದಕ್ಕೂ ಕುಂಬಮೇಳಕ್ಕೂ ಯಾಕೆ ಹೋಲಿಕೆ ಮಾಡುತ್ತೀರಿ? ಆಗಲೂ ನಿಮ್ಮದೇ ಪಕ್ಷದ ನಾಯಕರು ಸಾಕಷ್ಟು ಟೀಕೆ ಮಾಡಿದ್ದರು. ನಿಮಗೆ ಸಾವಿರಾರು ಜನ ಸೇರುವ ಒಂದು ದಿನದ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿಭಾಯಿಸಲು ಆಗಿಲ್ಲ. ಹಾಗಿರುವಾಗ ಉತ್ತರ ಪ್ರದೇಶದಲ್ಲಿ ದಿನಗಟ್ಟಲೆ ಕೋಟ್ಯಾಂತರ ಜನ ಬರುವ ಕಾರ್ಯಕ್ರಮದಲ್ಲಿ ಅವ್ಯವಸ್ಥೆಗಳು ಆಗುವುದು ಸಹಜವಲ್ಲವೇ? ಎಂದು ಹಲವರು ಸೋಷಿಯಲ್ ಮೀಡಿಯಾ ಮೂಲಕ ಟೀಕೆ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

145ಕೆಜಿ ಎತ್ತಿ ಕಂಚು ಗೆದ್ದ 7 ತಿಂಗಳ ಗರ್ಭಿಣಿ, ಇದೆಷ್ಟೂ ಸೂಕ್ತ ಎಂದಾ ನೆಟ್ಟಿಗರು

ಮತ್ತೊಮ್ಮೆ ಆರ್‌ಎಸ್‌ಎಸ್ ನಿಷೇಧಿಸುವಂತೆ ಕರೆ ನೀಡಿದ ಮಲ್ಲಿಕಾರ್ಜುನ ಖರ್ಗೆ

ವಿಎಚ್‌ಪಿ ಮುಖಂಡ ಶರಣ್ ಪಂಪ್‌ವೆಲ್ ವಿರುದ್ಧ ದಾಖಲಾಯಿತು ಪ್ರಕರಣ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ನಿವಾಸಕ್ಕೆ ಮತ್ತೇ ಭದ್ರತೆ ನೀಡಲು ಛಲವಾದಿ ನಾರಾಯಣಸ್ವಾಮಿ ಕೊಟ್ಟ ಕಾರಣಗಳು ಹೀಗಿದೆ

ಮುಂದಿನ ಸುದ್ದಿ
Show comments