Publish Date: Wed, 04 Jun 2025 (20:38 IST)
Updated Date: Wed, 04 Jun 2025 (20:49 IST)
ಬೆಂಗಳೂರು: ಐಪಿಎಲ್ ಗೆದ್ದು ಬಂದ ಆರ್ ಸಿಬಿಗೆ ಬೆಂಗಳೂರಿನಲ್ಲಿ ಓಪನ್ ಬಸ್ ನಲ್ಲಿ ಮೆರವಣಿಗೆ ಮಾಡಬೇಕೆಂದಿತ್ತು. ಆದರೆ ಅದಕ್ಕೆ ಸರ್ಕಾರ ಒಪ್ಪಿಗೆ ನೀಡಲಿಲ್ಲ. ಒಂದು ವೇಳೆ ಅದೇನಾದಾರೂ ಇದ್ದಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು? ಊಹಿಸಲೂ ಸಾಧ್ಯವಿಲ್ಲ
ಹೋಟೆಲ್ ನಿಂದ ಆರ್ ಸಿಬಿ ತಂಡ ವಿಧಾನಸೌಧಕ್ಕೆ ಬರುತ್ತಿದ್ದಂತೇ ಸಾಕಷ್ಟು ಜನ ರಸ್ತೆಯ ಎರಡೂ ಬದಿಗಳಲ್ಲಿ ನಿಂತು ಹರ್ಷೋದ್ಘಾರ ಮಾಡುತ್ತಿದ್ದರು. ಒಂದು ವೇಳೆ ಓಪನ್ ಬಸ್ ಮೆರವಣಿಗೆ ಇದ್ದಿದ್ದರೆ ಜನರನ್ನು ನಿಯಂತ್ರಿಸಲೂ ಸಾಧ್ಯವಿರುತ್ತಿರಲಿಲ್ಲ.
ಆರ್ ಸಿಬಿ ಕನಿಷ್ಠ ವಿಧಾನಸೌಧದಿಂದ ಚಿನ್ನಸ್ವಾಮಿಯವರೆಗಾದರೂ ಮೆರವಣಿಗೆಗೆ ಅವಕಾಶ ಕೇಳಿತ್ತು. ಆದರೆ ಭದ್ರತೆ ದೃಷ್ಟಿಯಿಂದ ಸಾಧ್ಯವಿಲ್ಲ ಎಂದು ಸರ್ಕಾರ ನಿರಾಕರಿಸಿತ್ತು. ಒಂದು ವೇಳೆ ಮೆರವಣಿಗೆ ಮಾಡಿದ್ರೆ ಸಾವು-ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತಿತ್ತು.
ಇದೇ ಕಾರಣಕ್ಕೆ ನಾವು ಅನುಮತಿ ನೀಡಿರಲಿಲ್ಲ. ವಿಧಾನಸೌಧದ ಬಳಿಯೂ ಜನ ಹೆಚ್ಚಾಗಿದ್ದರಿಂದ ಕೇವಲ 10 ನಿಮಿಷ ಕಾರ್ಯಕ್ರಮ ಮುಗಿಸಲು ತೀರ್ಮಾನಿಸಿದೆವು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಇಲ್ಲದೇ ಹೋಗಿದ್ದರೆ ವಿಧಾನಸೌಧದ ಮುಂದೆ ಕೊಹ್ಲಿ, ರಜತ್ ಪಾಟೀದಾರ್ ಸೇರಿದಂತೆ ಪ್ರಮುಖ ಆಟಗಾರರು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಬೇಕಿತ್ತು.