Publish Date: Wed, 04 Jun 2025 (15:37 IST)
Updated Date: Wed, 04 Jun 2025 (15:40 IST)
ಬೆಂಗಳೂರು: ಐಪಿಎಲ್ ನಲ್ಲಿ ಮೊದಲ ಕಪ್ ಗೆದ್ದು ಇದೀಗ ಆರ್ ಸಿಬಿ ಆಟಗಾರರು ಬೆಂಗಳೂರಿಗೆ ಬಂದಿಳಿದಿದ್ದಾರೆ. ಬೆಂಗಳೂರಿಗೆ ಬಂದಿಳಿಯುತ್ತಿದ್ದಂತೇ ಅಭಿಮಾನಿಗಳ ಸ್ವಾಗತ ನೋಡಿ ಸ್ವತಃ ಕೊಹ್ಲಿ ಶಾಕ್ ಆಗಿದ್ದಾರೆ.
ಇಂದು ವಿಶೇಷ ವಿಮಾನದಲ್ಲಿ ಆರ್ ಸಿಬಿ ಆಟಗಾರರು ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೇ ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ ಹೂಗುಚ್ಛ ನೀಡಿ ಆಟಗಾರರನ್ನು ಸ್ವಾಗತಿಸಿದ್ದಾರೆ. ಕೊಹ್ಲಿಗೆ ಆರ್ ಸಿಬಿ ಮತ್ತು ಕರ್ನಾಟಕ ಬಾವುಟ ನೀಡಿ ಸ್ವಾಗತಿಸಿದರು.
ಇನ್ನು ಬಸ್ ಮೂಲಕ ಆಟಗಾರರನ್ನು ಕರೆತರಲಾಗುತ್ತಿದೆ. ಈ ವೇಳೆ ರಸ್ತೆಯ ಎರಡೂ ಬದಿಗಳಲ್ಲಿ ಅಭಿಮಾನಿಗಳ ಸಾಗರವನ್ನೇ ಕಂಡು ಸ್ವತಃ ಕೊಹ್ಲಿ ಶಾಕ್ ಆಗಿದ್ದಾರೆ. ಬಸ್ ನ ಮುಂದಿನ ಸೀಟ್ ನಲ್ಲೇ ಟ್ರೋಫಿ ಹಿಡಿದುಕೊಂಡು ಅಭಿಮಾನಿಗಳ ಸಂಭ್ರಮವನ್ನು ಕೊಹ್ಲಿ ಕಣ್ತುಂಬಿಕೊಂಡಿದ್ದಾರೆ.