Select Your Language

Notifications

webdunia
webdunia
webdunia
webdunia

ಸಿಎಂಗೆ 2023ರಲ್ಲಿ ಬಳ್ಳಾರಿ ಮೇಲಿದ್ದ ಪ್ರೀತಿ ಈಗ ಎಲ್ಲೋಯ್ತು: ಪ್ರಹ್ಲಾದ್‌ ಜೋಶಿ ಪ್ರಶ್ನೆ

Bellary Maternal Case, Chief Minister Siddaramaiah, Central Minister Prahladh Joshi,

Sampriya

ಬೆಂಗಳೂರು , ಶನಿವಾರ, 7 ಡಿಸೆಂಬರ್ 2024 (16:44 IST)
Photo Courtesy X
ಬೆಂಗಳೂರು: 2023ರಲ್ಲಿ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬರುವುದಕ್ಕೂ ಮುನ್ನಾ ಬಳ್ಳಾರಿ ಬಗ್ಗೆ ಜಪ ಮಾಡುತ್ತಿದ್ದರು. ಆದರೆ ಆ ಪ್ರೀತಿ ಇದೀಗ ಎಲ್ಲಿ ಹೋಯಿತು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರಶ್ನೆ ಮಾಡಿದರು.

ಬಳ್ಳಾರಿಯಲ್ಲಿ ಸಂಭವಿಸಿದ ಸರಣಿ ಬಾಣಂತಿಯರ ಸಾವಿನ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ಬಳ್ಳಾರಿಯಲ್ಲಿ ಕಳಪೆ ಗುಣಮಟ್ಟದ ಐವಿ ದ್ರಾವಣ ಕೊಟ್ಟಿದ್ದರಿಂದಲೇ ಬಾಣಂತಿಯರ ಸಾವು ಸಂಭವಿಸಿದೆ. ಕಳೆದ ಕೆಲ ದಿನಗಳಿಂದ ನವಜಾತ ಶಿಶುಗಳ ಮರಣಗಳ ಸಂಖ್ಯೆಯಲ್ಲೂ ಜಾಸ್ತಿಯಾಗಿದೆ. ಬಾಣಂತಿಯರ ಸಾವಿನ ಸಂಖ್ಯೆಯೂ ಜಾಸ್ತಿಯಾಗಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸಿಎಂ ಸಿದ್ದರಾಮಯ್ಯ ಹಿಂದೆ ಓಡಾಡುತ್ತಿದ್ದಾರೆ ಬಿಟ್ರೆ, ಇದನ್ನು ನಿಭಾಯಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು,

ಸರ್ಕಾರದಲ್ಲಿರವ ಭ್ರಷ್ಟಚಾರದಿಂದಾಗಿ ಕಳಪೆ ಗುಣಮಟ್ಟದ ದ್ರಾವಣ ಸರಬರಾಜು ಆಗಿದೆ.  ಆಡಳಿತದ ಕಡೆ ಗಮನವಿಲ್ಲದ ರಾಜ್ಯ ಸರ್ಕಾರ ಜನರ ಜೀವದ ಜತೆ ಚೆಲ್ಲಾಟವಾಡುತ್ತಿದೆ. ಸಿಎಂ ಸಿದ್ದರಾಮಯ್ಯ ಅವರು  ತಮ್ಮನ್ನು ತಾವು ಮುಡಾ, ವಾಲ್ಮೀಕಿ ಹಗರಣದಿಂದ ರಕ್ಷಿಸಿಕೊಳ್ಳುವುದರಲ್ಲಿ ಆಡಳಿತದ ಕಡೆ ಸಂಪೂರ್ಣ ನಿರ್ಲಕ್ಷ್ಯ ತೋರಿದ್ದಾರೆ ಎಂದು ಕಿಡಿಕಾರಿದರು.

ಆರೋಗ್ಯ ಇಲಾಖೆ ಮೇಲೆ ದಿನೇಶ್ ಗುಂಡೂರಾವ್ ಅವರಿಗೆ ಹಿಡಿತವಿಲ್ಲ.  ನಾನು ರಾಜೀನಾಮೆ ಕೊಡುವುದರಿಂದ ಸಮಸ್ಯೆ ಪರಿಹಾರ ಆಗುವುದಾದರೆ ನಾನು ರಾಜೀನಾಮೆ ಕೊಡುತ್ತೇನೆ ಎಂದು ಸಿಎಂ ಉಡಾಫೆಯಾಗಿ ಉತ್ತಿರುಸುತ್ತಾರೆ. ಅವರಿಗೆ ನೈತಿಕತೆ ಇದ್ದಿದ್ದರೆ ರಾಜೀನಾಮೆ ಕೊಡಬೇಕಿತ್ತು. ಇವರೆಲ್ಲ ಡ್ರಾಮ ಕಂಪೆನಿ ಮಾಡುವಂತವರು ಎಂದು ಗರಂ ಆದರೂ.

ಬಳ್ಳಾರಿಗೆ ಇದುವರೆಗೂ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್, ಜಿಲ್ಲಾ ಉಸ್ತುವಾರಿ ಸಚಿವರಾದ ಜಮೀರ್ ಅಹ್ಮದ್ ಅವರು ಭೇಟಿ ನೀಡಿಲ್ಲ. ಇಂತವರು ಕೇಂದ್ರದ ಮೇಲೆ ಆರೋಪ ಮಾಡುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಳ್ಳಾರಿ ಬಾಣಂತಿಯರ ಪ್ರಕರಣ: ಮಹತ್ವದ ಹೇಳಿಕೆ ಕೊಟ್ಟ ಸಿಎಂ ಸಿದ್ದರಾಮಯ್ಯ