Select Your Language

Notifications

webdunia
webdunia
webdunia
webdunia

ಕೇರಳದ ಲಾಬಿಗೆ ಮಣಿದು ಸಿಎಂ, ಡಿಸಿಎಂ ನಂದಿನಿಯನ್ನು ಹಾಳು ಮಾಡುತ್ತಿದ್ದಾರೆ: ವಿಜಯೇಂದ್ರ ಕಿಡಿ

ಕೇರಳದ ಲಾಬಿಗೆ ಮಣಿದು ಸಿಎಂ, ಡಿಸಿಎಂ ನಂದಿನಿಯನ್ನು ಹಾಳು ಮಾಡುತ್ತಿದ್ದಾರೆ: ವಿಜಯೇಂದ್ರ ಕಿಡಿ

Sampriya

ಬೆಂಗಳೂರು , ಗುರುವಾರ, 5 ಡಿಸೆಂಬರ್ 2024 (17:02 IST)
ಬೆಂಗಳೂರು: ಕೇರಳ ಲಾಬಿಗೆ ಮಣಿದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ನಂದಿನಿಯನ್ನು ಉದ್ದೇಶಪೂರ್ವಕವಾಗಿ ಹಾಳು ಮಾಡಿ ಖಾಸಗಿ ಬ್ರ್ಯಾಂಡ್‌ಗಳನ್ನು ರಕ್ಷಿಸುತ್ತಿದ್ದಾರೆ ಎಂದು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಗಂಭೀರ ಆರೋಪ ಮಾಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಅವರು ಬರೆದುಕೊಂಡಿದ್ದಾರೆ.

ನಂದಿನಿಯನ್ನು ಅಮುಲ್ ಜೊತೆ ವಿಲೀನ ಮಾಡಲಾಗುತ್ತದೆ ಎಂದು ಸುಳ್ಳು ಹರಡಿದ ಕಾಂಗ್ರೆಸ್, ಇದೀಗ ಅಧಿಕಾರಕ್ಕೆ ಬಂದ ಬಳಿಕ ನಂದಿನಿಯನ್ನು ಹಾಳುಗೆಡವುತ್ತಿದೆ ಎಂದರು.

ಕೆ.ಎಂ.ಎಫ್‌.ನ ಎಂ.ಡಿ. ಆಗಿದ್ದ ಜಗದೀಶ್ ಅವರನ್ನು ವರ್ಗಾಯಿಸಿದ್ದನ್ನು ಹಾಗೂ ನಂದಿನಿಯ ಬಹುನಿರೀಕ್ಷಿತ ಇಡ್ಲಿ–ದೋಸೆ ಹಿಟ್ಟು ಮಾರುಕಟ್ಟೆಗೆ ಬರುವುದು ವಿಳಂಬವಾಗುತ್ತಿರುವ ವರದಿಯನ್ನು ಉಲ್ಲೇಖಿಸಿ ಅವರು ಈ ರೀತಿ ಬರೆದುಕೊಂಡಿದ್ದಾರೆ.

ಐಡಿಯಂತಹ ಪ್ರತಿಸ್ಪರ್ಧಿ ಬ್ರ್ಯಾಂಡ್‌ಗಳಿಗೆ ಸಡ್ಡು ಹೊಡೆದು ಇಡ್ಲಿ/ದೋಸೆ ಹಿಟ್ಟಿನಂತಹ ನವೀನ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಮೊದಲೇ, ನಂದಿನಿಯ ಯಶಸ್ಸಿನ ಹಿಂದಿನ ಚಾಲನಾ ಶಕ್ತಿಯಾಗಿದ್ದ ಕೆ.ಎಂ.ಎಫ್. ಎಂ.ಡಿ. ಎಂ.ಕೆ. ಜಗದೀಶ್ ಅವರನ್ನು ಹಠಾತ್ ವರ್ಗಾವಣೆಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಅವರ ನಾಯಕತ್ವದಲ್ಲಿ ನಂದಿನಿ ಹೊಸ ಎತ್ತರಕ್ಕೆ ಏರಿತ್ತು. ಐಎಸ್‌ಎಲ್, ಪ್ರೊ ಕಬಡ್ಡಿ ಹಾಗೂ ಅಂತರರಾಷ್ಟ್ರೀಯ ಕ್ರಿಕೆಟ್ ತಂಡಗಳಿಗೆ ಪ್ರಾಯೋಜಕತ್ವ ನೀಡಿದ್ದಲ್ಲದೇ, ದೆಹಲಿ, ದುಬೈ ಮಾರುಕಟ್ಟೆಗೆ ವಿಸ್ತರಣೆಗೊಂಡಿತ್ತು. ತಿರುಪತಿ ಜೊತೆಗಿನ ಸಂಬಂಧ ಮತ್ತೆ ಸರಿಯಾಗಿತ್ತು ಎಂದು ಹೇಳಿದ್ದಾರೆ.

ಈಗ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸೇರಿ ಕೇರಳ ಲಾಬಿಗೆ ಮಣಿದು ಖಾಸಗಿ ಬ್ರ್ಯಾಂಡ್‌ಗಳನ್ನು ರಕ್ಷಿಸಲು ನಂದಿನಿಯನ್ನು ಹಾಳುಗೆಡವುತ್ತಿದ್ದಾರೆ. ಸಮರ್ಪಣಾ ಮನೋಭಾವದ ಅಧಿಕಾರಿ ಒಳ್ಳೆಯ ಕೆಲಸ ಮಾಡಿದ್ದಕ್ಕೆ ವರ್ಗಾವಣೆ ಮಾಡಲಾಗಿದೆ. ಒಳ್ಳೆಯ ಕೆಲಸ ಮಾಡುವುದು ಈ ಸರ್ಕಾರದಲ್ಲಿ ಸ್ವೀಕಾರಾರ್ಹವಲ್ಲ ಎಂದು ಟೀಕಿಸಿದ್ದಾರೆ.

ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆ? ಕರ್ನಾಟಕದ ಜನತೆ ಉತ್ತರ ಕೇಳುತ್ತಾರೆ!

Share this Story:

Follow Webdunia kannada

ಮುಂದಿನ ಸುದ್ದಿ

ಸಮಾನತೆ ಇರಬೇಕು ಎಂದು ಕಾಂಗ್ರೆಸ್ ಸಂವಿಧಾನ ಜಾರಿಗೆ ತಂದಿದೆ: ರಣದೀಪ್ ಸಿಂಗ್ ಸುರ್ಜೇವಾಲ