ಬಳ್ಳಾರಿ: ಕಳಪೆ ಔಷಧಿಯಿಂದ ಕೊಲೆಗಡುಕ ಕಾಂಗ್ರೆಸ್ ಸರ್ಕಾರದಿಂದ ಬಳ್ಳಾರಿಯಲ್ಲಿ ಮತ್ತೊಬ್ಬ ಬಾಣಂತಿ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಗಂಭೀರ ಆರೋಪ ಮಾಡಿದರು.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಅವರು ಬರೆದುಕೊಂಡಿದ್ದಾರೆ.
ಕೊಲೆಗಡುಕ ಕಾಂಗ್ರೆಸ್ ಸರ್ಕಾರದಿಂದ ಬಳ್ಳಾರಿಯಲ್ಲಿ ಮತ್ತೊಬ್ಬ ಬಾಣಂತಿ ಮಹಿಳೆ ಮಗು ಸಾವು
ಸ್ವಾಮಿ ಸಿಎಂ ಸಿದ್ದರಾಮಯ್ಯ ನವರೇ, ನಿಮಗೆ ಮಾನವೀಯತೆ ಇದೆಯಾ? ನಿಮಗೆ ಮನುಷ್ಯತ್ವ ಇದೆಯಾ?
ಬಳ್ಳಾರಿಯಲ್ಲಿ ಕಳಪೆ ಔಷಧಿಯಿಂದ ಮತ್ತೊಬ್ಬ ಬಾಣಂತಿ, ಮಗುವಿನ ಸಾವಾಗಿದೆ. ನೀವು ಮಾಡಿದ ಕಾಟಾಚಾರದ ಸಭೆಗಳಿಂದ ಯಾವ ಪ್ರಯೋಜನವೂ ಆಗಿಲ್ಲ. ಇಷ್ಟಾದರೂ ತಾವಾಗಲಿ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಾಗಲಿ ಬಳ್ಳಾರಿಗೆ ಭೇಟಿ ನೀಡಿಲ್ಲ. ನಿಮ್ಮನ್ನ ಕೊಲೆಗಡುಕ ಸರ್ಕಾರ ಅನ್ನದೆ ಇನ್ನೇನು ಅನ್ನಬೇಕು?
ಬಡ ಕುಟುಂಬದ ಮಹಿಳೆಯರಿಗೆ, ಮಕ್ಕಳಿಗೆ ಮೊದಲು ಜೀವದ ಗ್ಯಾರೆಂಟಿ ಕೊಡಿ. ಬದುಕುವ ಭಾಗ್ಯ ಕೊಡಿ. ತಾವು ಬಳ್ಳಾರಿಗೆ ಭೇಟಿ ಕೊಡಲು ಇನ್ನು ಎಷ್ಟು ಮಹಿಳೆಯರು, ಹಸುಗೂಸುಗಳ ಹೆಣ ಬೀಳಬೇಕು? ನಾಚಿಕೆಯಾಗಬೇಕು ನಿಮ್ಮ ಕಾಂಗ್ರೆಸ್ ಸರ್ಕಾರಕ್ಕೆ.