Publish Date: Fri, 16 Jun 2023 (21:00 IST)
Updated Date: Fri, 16 Jun 2023 (20:44 IST)
ಎಫ್‌ಸಿಐ ಜೊತೆ ಕಮಿಟ್ಮೆಂಟ್ ಪತ್ರ ತೋರಿಸಲು ಎಂದು ಸಿ.ಟಿ ರವಿ ಸವಾಲ್ ವಿಚಾರವಾಗಿ ಕಮಿಟ್ಮೆಂಟ್ ಪತ್ರ ಸಿಎಂ ಸಿದ್ದರಾಮಯ್ಯ ಬಿಡುಗಡೆ ಮಾಡಿದ್ದಾರೆ.ಇಲ್ಲಿದೆ ಎಫ್.ಸಿ.ಐ ಕಮಿಟ್‌ಮೆಂಟ್ ಪತ್ರ ಎಂದು ಸಿಎಂ ತಿರುಗೇಟು ನೀಡಿದ್ದಾರೆ.ಬೇಜವಾಬ್ದಾರಿ ಹೇಳಿಕೆ, ಸುಳ್ಳು, ಅಪಪ್ರಚಾರದ ಗೀಳಿಗಾಗಿಯೇ,ರಾಜ್ಯದ ಪ್ರಜ್ಞಾವಂತ ಮತದಾರರು ಬಿಜೆಪಿಯ ಇಂತಹ ನಾಯಕರನ್ನು ಸೋಲಿಸಿ ಮನೆಗೆ ಕಳಿಸಿರುವುದು.ಸಿ.ಟಿ.ರವಿ, ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಿ,ಬಡವರ ಹಸಿವು ನೀಗಿಸುವ ಅನ್ನಭಾಗ್ಯ ಯೋಜನೆಗೆ ಬೇಕಾಗುವ ಅಕ್ಕಿ ಪೂರೈಸುವಂತೆ ಮಾಡಬೇಕೇ ಹೊರತು,ಬಡವರ ಹೊಟ್ಟೆಗೆ ಹೊಡೆಯುವ ಕೇಂದ್ರ ಸರ್ಕಾರದ ಜನವಿರೋಧಿ ನಿಲುವನ್ನು ಬೆಂಬಲಿಸುವುದಲ್ಲ ಎಂದು ಸಿ.ಟಿ ರವಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
geetha
Publish Date: Fri, 16 Jun 2023 (21:00 IST)
Updated Date: Fri, 16 Jun 2023 (20:44 IST)