Publish Date: Fri, 16 Jun 2023 (20:42 IST)
Updated Date: Fri, 16 Jun 2023 (20:34 IST)
ಮಂತಾಂತರ ಆಗದ ವೇಳೆ ರಕ್ತದಕೋಡಿ ಹರಿಸಿದ್ರು.ಇಂತಹವರ ಪಾಠವನ್ನು ಪುಸ್ತಕದಲ್ಲಿ ಇಡ್ತಿದೀರಾ?ಹೆಡ್ಗೆವಾರ್ ದೇಶದ್ರೋಹಿ ಸಂಸ್ಥಾನದವರಾ..?ಏನ್ ದೇಶ ದ್ರೋಹ ಮಾಡಿದಾರೆ ಅವರು..?ಟಿಪ್ಪು ಸುಲ್ತಾನ್ ರಂತೆ ದೇಶ ದ್ರೋಹ ಮಾಡಿದ್ರಾ?ಈ ಎಲ್ಲಾ ವಿಚಾರಗಳ ಬಗ್ಗೆ ಜನರ ಬಳಿ ತೆಗೆದುಕೊಂಡು ಹೋಗ್ತೇವೆ.ನಿಮಗೆ ತಾಕತ್ ಇದ್ರೆ ಅಂಬೇಡ್ಕರ್ ಕಾಂಗ್ರೆಸ್ ಬಗ್ಗೆ ಏನ್ ಹೇಳಿದ್ದಾರೆ ಅದನ್ನೂ ಸೇರಿಸಿ ಎಂದು ಎಂಎಲ್ ಸಿ ರವಿಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಮಂತಾಂತರ ನಿಷೇಧ ಕಾಯ್ದೆ ವಾಪಾಸ್ ವಿಚಾರವಾಗಿಯೂ ಪ್ರತಿಕ್ರಿಯಿಸಿದ್ದು,ಟಿಪ್ಪು ಮತಾಂತರ ಮಾಡಲಿಲ್ವಾ?ಚರ್ಚ್ ಗಳನ್ನ ಬೀಳಿಸಲಿಲ್ವಾ?ಸಿದ್ದರಾಮಯ್ಯ ದೇಶದ್ರೋಹ ಮಾಡಿದ್ದಾರೆ.ಬಲವಂತದ ಮತಾಂತರ ನಡೆಸಬೇಕಾಮಂತಾಂತರ ನಿಷೇಧ ಕಾಯ್ದೆ ಮತ್ತೆ ಯಾಕ್ ತೆಗಿತಿದೀರಿ?ಇದರ ವಿರುದ್ಧವೂ ಜನರ ಬಳಿ ಹೋಗ್ತೇನೆ.ನಾಡಗೀತೆ, ರಾಷ್ಟ್ರಗೀತೆ ಜೊತೆಗೆ ಸಂವಿಧಾನ ಪೀಠಿಕೆ ಓದುವ ವಿಚಾರದಲ್ಲಿ ಸಂವಿಧಾನ ಪೀಠಿಕೆ ಓದುವುದು ಸ್ವಾಗತಾರ್ಹ ಅಂತ ಎಂ ಎಲ್ ಸಿ ರವಿಕುಮಾರ್ ಹೇಳಿದ್ರು.ಅಲ್ಲದೇ ನನ್ನ ಜೀವ ಇರೋವರೆಗೂ ಕಾಂಗ್ರೆಸ್ ಸೇರಲ್ಲ ಅಂತಾ ಅಂಬೇಡ್ಕರ್ ಹೇಳಿದ್ರು.ಇದನ್ನೂ ಪಠ್ಯದಲ್ಲಿ ಸೇರಿಸಿ ಎಂದು ಎಂಎಲ್ ಸಿ ರವಿಕುಮಾರ್ ಚಾಲೆಂಜ್ ಮಾಡಿದ್ದಾರೆ.