Select Your Language

Notifications

webdunia
webdunia
webdunia
webdunia

ಜಮೀನು ವಿಚಾರವಾಗಿ 2 ಕುಟುಂಬಗಳ ಗಲಾಟೆ

ಜಮೀನು ವಿಚಾರವಾಗಿ 2 ಕುಟುಂಬಗಳ ಗಲಾಟೆ
bangalore , ಶುಕ್ರವಾರ, 16 ಜೂನ್ 2023 (19:53 IST)
ಜಮೀನು ವಿಚಾರವಾಗಿ ಮಹಿಳೆ ಹಾಗೂ ಕುಟುಂಬದವರ ಮೇಲೆ ಹಲ್ಲೆ ನಡೆಸಿರೋ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಐತನಹಳ್ಳಿ ಗ್ರಾಮದಲ್ಲಿ ನಡೆದಿದೆ. ಹಲ್ಲೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗೌರಮಣಿ ಎಂಬುವವರ ಮೇಲೆ ಹಲ್ಲೆ ನಡೆಸಲಾಗಿದೆ. ಐತನಹಳ್ಳಿ ಗ್ರಾಮದ ಪುಟ್ಟಸ್ವಾಮಿ ಸಣ್ಣ ತಮ್ಮಯ್ಯ ಹಾಗೂ ನಾಗರಾಜಯ್ಯ ಸಿದ್ದ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿದ ನಂತರ ಪುಟ್ಟಸ್ವಾಮಿ ಕುಟಂಬದಿಂದ ಪ್ರತಿ ದೂರು ದಾಖಲಾಗಿದೆ. ಪುಟ್ಟಸ್ವಾಮಿ ಕುಟುಂಬ ಸುಳ್ಳು ಪ್ರಕರಣ ದಾಖಲಿಸಿದೆ ಆರೋಪಿಸುತ್ತಿದೆ. ಜಮೀನು ವಿಚಾರವಾಗಿ ಎರಡು ಕುಟುಂಬದ ನಡುವೆ ವ್ಯಾಜ್ಯ ಶುರುವಾಗಿದ್ದು, ಪಿರಿಯಾಪಟ್ಟಣದ ನ್ಯಾಯಾಲಯದಲ್ಲಿ ಗೌರಮಣಿ ಕುಟುಂಬಕ್ಕೆ ಗೆಲುವಾಗಿದೆ. ಇದರಿಂದ ಅಸಮಾಧಾನಗೊಂಡು ಹಲ್ಲೆ ಆರೋಪ ಮಾಡಲಾಗಿದೆ. ಹಲ್ಲೆಗೊಳಗಾದ ಗೌರಮಣಿಗೆ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ಧಾರೆ. ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೂಕ್ತ ಭದ್ರತೆ ನೀಡುವಂತೆ ಗೌರಮಣಿ ಕುಟುಂಬದವರ ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮದ್ಯದ ಬಾಟೆಲ್ ಹಿಡಿದು ಮಹಿಳೆಯರ ಹೈಡ್ರಾಮ