Select Your Language

Notifications

webdunia
webdunia
webdunia
webdunia

ಮದ್ಯದ ಬಾಟೆಲ್ ಹಿಡಿದು ಮಹಿಳೆಯರ ಹೈಡ್ರಾಮ

ಮದ್ಯದ ಬಾಟೆಲ್ ಹಿಡಿದು ಮಹಿಳೆಯರ ಹೈಡ್ರಾಮ
ಹುಬ್ಬಳ್ಳಿ , ಶುಕ್ರವಾರ, 16 ಜೂನ್ 2023 (19:47 IST)
ಬಸ್ ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಆಯ್ತು. ಇದೀಗ ಮದ್ಯ ತರಲು ಮಹಿಳೆಯರಿಗೆ ಅವಕಾಶ ಕೊಡಿ ಅಂತ ಮಹಿಳೆಯರು ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಗದಗದಲ್ಲಿ ನಡೆದಿದೆ. ಹುಬ್ಬಳ್ಳಿಯಿಂದ ಗದಗಗೆ ಬರ್ತಿದ್ದ ಸಾರಿಗೆ ಸಂಸ್ಥೆ ಬಸ್ ನಲ್ಲಿ ಈ ಘಟನೆ ನಡೆದಿದೆ. ನಿವೃತ್ತ ಯೋಧರಿಗೆ ಆರ್ಮಿ ಕ್ಯಾಂಟಿನ್ ನಲ್ಲಿ ಅಗ್ಗದ ಬೆಲೆಗೆ ಮದ್ಯ ಸಿಗತ್ತೆ. ಈ ಹಿನ್ನೆಲೆ ಅದನ್ನ ಅವರ ಮನೆಯ ಸದಸ್ಯರು ಹೋಗಿ ತರಬಹುದು. ಹಾಗಾಗಿ ಮನೆಯ ಸದಸ್ಯರಾದ ಮಹಿಳೆಯರು ಮದ್ಯದ ಬಾಟೆಲ್ ಗಳನ್ನು ತರಲು ತೆರಳಿದ್ದಾರೆ. ಈ ವೇಳೆ ಮದ್ಯದ ಬಾಟಲ್ ಹಿಡಿದು ಬಸ್ ಹತ್ತಿದ್ದ ಇಬ್ಬರು ಮಹಿಳೆಯರನ್ನ ಮದ್ಯದ ಬಾಟಲ್ ತರಲು ಅವಕಾಶ ಇಲ್ಲ ಅಂತ ಕಂಡಕ್ಟರ್ ಕೆಳಗಿಳಿಸಿದ್ದಾರೆ. ಈ ವೇಳೆ ಕಂಡಕ್ಟರ್ ಜೊತೆಗೆ ಮಹಿಳೆಯರು ಜಗಳಕ್ಕೆ ಬಿದ್ದಿದ್ದಾರೆ. ಬಳಿಕ ದಾರಿ ಮಧ್ಯೆ ಮಹಿಳೆಯರನ್ನ ಇಳಿಸಿದ್ದಕ್ಕೆ ಕಂಡಕ್ಟರ್ ವಿರುದ್ಧ ದೂರು ನೀಡಲು ಮಹಿಳೆಯರು ಮುಂದಾಗಿದ್ದಾರೆ. ನಮಗೆ ಮದ್ಯ ತರಲು ಸರಕಾರ ಯಾವುದಾದರೂ ದಾರಿ ತೋರಿಸಲಿ. ಕುಡಿದು ಬಂದವರಿಗೆ ಬಸ್​ನಲ್ಲಿ ಪ್ರಯಾಣಿಸಲು ಅವಕಾಶ ಕೊಡ್ತಿರಿ. ಆದ್ರೆ ಮನೆಗೆ ಮದ್ಯದ ಬಾಟಲ್ ತರಲು ಅವಕಾಶ ಯಾಕಿಲ್ಲ ಅಂತ ಗದಗ ಟೌನ್ ಪೊಲೀಸ್ ಠಾಣೆ ಮುಂದೆ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಿಳೆಯರಿಗೆ ಮಾಜಿ ಸೈನಿಕರ ಸಂಘದವರು ಸಾಥ್ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬ್ರಿಜ್ ಭೂಷಣ್ ವಿರುದ್ಧ ಪೋಕ್ಸೊ ಪ್ರಕರಣ ರದ್ದು