ದಾರಿ ಮಧ್ಯೆಯೇ ಬಾಲಕಿಯರ ಸಮಸ್ಯೆ ನಿವಾರಿಸಿದ ಸಿಎಂ ಕುಮಾರಸ್ವಾಮಿ

ಬುಧವಾರ, 26 ಜೂನ್ 2019 (12:09 IST)
ಬೆಂಗಳೂರು: ಕರೇಗುಡ್ಡದಲ್ಲಿ ಗ್ರಾಮವಾಸ್ತವ್ಯ ಮಾಡಲು ಬಸ್ ಮೂಲಕ ಪ್ರಯಾಣಿಸುವಾಗ ದಾರಿ ಮಧ್ಯೆಯೇ  ಸಿಎಂ ಕುಮಾರಸ್ವಾಮಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ್ದಾರೆ.


ಸಿಎಂ ಪ್ರಯಾಣಿಸುತ್ತಿದ್ದ ಬಸ್ ಸುತ್ತ ಸುತ್ತುವರಿದ ವಿದ್ಯಾರ್ಥಿನಿಯರ ಪೈಕಿ ಒಂಭತ್ತನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ತಮ್ಮ ಶಾಲೆಯ ಸಂಕಷ್ಟಗಳ ಬಗ್ಗೆ ಅಹವಾಲು ನೀಡಿದ್ದಾಳೆ. ಶಿಕ್ಷಕರ ಕೊರತೆ, ಹಾಸ್ಟೆಲ್ ಕೊರತೆ ಬಗ್ಗೆ ಮನದಟ್ಟು ಮಾಡಿದ್ದಾಳೆ.

ಇದಕ್ಕೆ ತಕ್ಷಣವೇ ಸ್ಪಂದಿಸಿದ ಸಿಎಂ ಕುಮಾರಸ್ವಾಮಿ ತಕ್ಷಣವೇ ಹಾಸ್ಟೆಲ್ ಕಟ್ಟಿಸಿಕೊಡಲು ಕ್ರಮಕೈಗೊಳ್ಳುವುದಾಗಿ ಹೇಳಿದರು. ಅಲ್ಲದೆ, ಶಿಕ್ಷಕರ ಕೊರತೆ ನೀಗಿಸಲೂ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಈ ನಡುವೆ ಸಾರ್ವಜನಿಕರು ಪದವಿಪೂರ್ವ ಕಾಲೇಜು ಸ್ಥಾಪನೆಗೆ ಒತ್ತಾಯಿಸಿದಾಗ ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭಿಸುವುದಾಗಿ ಭರವಸೆ ನೀಡಿದರು.

ಸಿಎಂ ಕುಮಾರಸ್ವಾಮಿ ಪ್ರಯಾಣಿಸುತ್ತಿರುವ ವಾಹನವನ್ನು ಅಲ್ಲಲ್ಲಿ ತಡೆಗಟ್ಟಿ ಸಾರ್ವಜನಿಕರು ತಮ್ಮ ದೂರು, ದುಮ್ಮಾನಗಳನ್ನು ಹೇಳುವ ದೃಶ್ಯ ಸಾಮಾನ್ಯವಾಗಿತ್ತು.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸಿಎಂ ಗ್ರಾಮವಾಸ್ತವ್ಯ ಮಾಡಿದ್ರೆ ನಮಗೂ ಲಾಭವಾಗುತ್ತೆ ಎಂದ ಈಶ್ವರ ಖಂಡ್ರೆ