Select Your Language

Notifications

webdunia
webdunia
webdunia
Tuesday, 8 April 2025
webdunia

ಸಿಎಂ ಗ್ರಾಮವಾಸ್ತವ್ಯ ಪ್ರತಿಯಾಗಿ ಇಂದು ಬಿಜೆಪಿಯವರಿಂದ ಪಾದಯಾತ್ರೆ

ಬೆಂಗಳೂರು
ಬೆಂಗಳೂರು , ಸೋಮವಾರ, 24 ಜೂನ್ 2019 (10:04 IST)
ಬೆಂಗಳೂರು : ಜನರ ಸಮಸ್ಯೆಗಳನ್ನು ಅರಿಯಲು  ಸಿಎಂ ಗ್ರಾಮವಾಸ್ತವ್ಯ ಹೂಡಿದ್ದರೆ  ಅದಕ್ಕೆ ಪ್ರತಿಯಾಗಿ ಇದೀಗ ಬಿಜೆಪಿ ಪಾದಯಾತ್ರೆ ಮಾಡುವ ಅಸ್ತ್ರವನ್ನು ಪ್ರಯೋಗ ಮಾಡಿದೆ.



ಹೌದು. ಜೂ.26ರಂದು ಬೆಳಗ್ಗೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕರಿಗುಡ್ಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯವನ್ನು ಮಾಡಿ ಜನತಾದರ್ಶನ ನಡೆಸಲಿದ್ದಾರೆ.


ಇದಕ್ಕೆ ಪ್ರತಿಯಾಗಿ ಇಂದು ಬಿಜೆಪಿ ಕರೇಗುಡ್ಡ ಗ್ರಾಮಕ್ಕೆ ಪಾದಯಾತ್ರೆ ಹೊರಡಲು ನಿರ್ಧಾರಿಸಿದ್ದು, ದೇವದುರ್ಗಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಶಿವನಗೌಡ ನಾಯಕ ನೇತೃತ್ವದಲ್ಲಿ 25 ಸಾವಿರ ಜನರು ಪಾದಯಾತ್ರೆ ಮಾಡಲಿದ್ದಾರೆ.  ದೇವದುರ್ಗಾ ತಾಲೂಕಿನ ಗೂಗಲ್ ಗ್ರಾಮದಿಂದ ಬಿಜೆಪಿಯವರು ಪಾದಯಾತ್ರೆಗೆ ಹೊರಡಲಿದ್ದಾರೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಜಪಾನಿನಲ್ಲಿ ರೈಲು ಸಂಚಾರ ಸ್ಥಗಿತಗೊಳ್ಳಲು ಕಾರಣವಾಯ್ತು ಒಂದು ಸಣ್ಣ ಅಂಟುಹುಳ