Select Your Language

Notifications

webdunia
webdunia
webdunia
webdunia

ಮಂಡ್ಯ ಜನರ ಸಮಸ್ಯೆ ಪರಿಹರಿಸುವಲ್ಲಿ ಸುಮಲತಾ ಅಂಬರೀಶ್ ಗೆ ಮೊದಲ ಜಯ

ಸುಮಲತಾ ಅಂಬರೀಶ್
ಮಂಡ್ಯ , ಮಂಗಳವಾರ, 25 ಜೂನ್ 2019 (09:55 IST)
ಮಂಡ್ಯ: ನೂತನ ಸಂಸದೆಯಾಗಿ ಆಯ್ಕೆಯಾದ ಬಳಿಕ ಮಂಡ್ಯ ಕ್ಷೇತ್ರದಲ್ಲಿ ಜನರ ಸಮಸ್ಯೆಗೆ ಧ್ವನಿಯಾಗುವೆ ಎಂದಿದ್ದ ಸುಮಲತಾ ಅಂಬರೀಶ್ ಗೆ ಮೊದಲ ಜಯ ಸಿಕ್ಕಿದೆ.


ಸಂಸತ್ತಿನ ಮೊದಲ ಅಧಿವೇಶನದಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳಿದ್ದ ವೇಳೆ ಕೇಂದ್ರ ಸಚಿವ ಸದಾನಂದ ಗೌಡರನ್ನು ಭೇಟಿಯಾಗಿದ್ದ ಸುಮಲತಾ ಮಂಡ್ಯ ಜಿಲ್ಲೆಯ ರೈತರಿಗೆ ಕಾವೇರಿ ನೀರು ಹರಿಸುವಂತೆ ಮನವಿ ಪತ್ರ ನೀಡಿದ್ದರು. ಈ ಭೇಟಿಗೆ ಯಶಸ್ಸು ಸಿಕ್ಕಿದೆ.

ಸಂಸದೆಯ ಮನವಿಗೆ ಸ್ಪಂದಿಸಿರುವ ಕೇಂದ್ರ ಸಚಿವ ಸದಾನಂದ ಗೌಡ, ಕಾವೇರಿ ನಿರ್ವಹಣಾ ಮಂಡಳಿಗೆ ಈ ಬಗ್ಗೆ ಪತ್ರ ಬರೆಯಲಾಗಿದ್ದು, ಮಂಡ್ಯ ರೈತರಿಗೆ 2 ಟಿಎಂಸಿ ನೀರು ಬಿಡಲು ಪ್ರಾಧಿಕಾರಕ್ಕೆ ಮನವಿ ಮಾಡಲಾಗಿದೆ. ಈ ಮನವಿಯನ್ನು ಪುರಸ್ಕರಿಸಿರುವ ಪ್ರಾಧಿಕಾರ ಇಂದು ನಡೆಯಲಿರುವ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದಿದೆ ಎಂದು ಹೇಳಿದ್ದಾರೆ. ತಮ್ಮ ಪ್ರಯತ್ನಕ್ಕೆ ಮೊದಲ ಯಶಸ್ಸು ಸಿಕ್ಕಿರುವುದು ಸುಮಲತಾಗೂ ಸಂತೋಷ ನೀಡಿದ್ದು, ಟ್ವಿಟರ್ ಮೂಲಕ ಸಚಿವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಮಾನದಲ್ಲಿ ನಿದ್ದೆ ಮಾಡಿ ಫಜೀತಿಗೆ ಸಿಲುಕಿದ ಮಹಿಳೆ