Publish Date: Wed, 19 Jun 2019 (11:35 IST)
Updated Date: Wed, 19 Jun 2019 (11:37 IST)
ಬೆಂಗಳೂರು: ಕಾಂಗ್ರೆಸ್ ಜತೆಗಿನ ಮೈತ್ರಿ ಬಗ್ಗೆ ಸಿಎಂ ಕುಮಾರಸ್ವಾಮಿ ತಮ್ಮ ಮನದಾಳದ ನೋವನ್ನು ಪರೋಕ್ಷವಾಗಿ ತೋಡಿಕೊಂಡಿದ್ದಾರೆ. ಪ್ರತಿದಿನ ನೋವು ಅನುಭವಿಸುತ್ತಿದ್ದೇನೆ. ಆದರೂ ರಾಜ್ಯಕ್ಕಾಗಿ ನೋವು ಸಹಿಸುತ್ತಿದ್ದೇನೆ ಎಂದಿದ್ದಾರೆ.
ಕಾಂಗ್ರೆಸ್ ನಾಯಕರೊಂದಿಗಿನ ಅಸಮಾಧಾನದ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ‘ಪ್ರತಿದಿನ ನೋವಿನಲ್ಲಿದ್ದೇನೆ. ಆದರೆ ಎಲ್ಲವನ್ನೂ ಹೇಳಲಾಗದ ಸ್ಥಿತಿಯಲ್ಲಿದ್ದೇನೆ. ನಾನು ಇದನ್ನೆಲ್ಲಾ ಹೇಳುತ್ತಾ ಕೂತರೆ ಜನರ ಸಮಸ್ಯೆಯನ್ನು ಪರಿಹರಿಸುವವರು ಯಾರು?’ ಎಂದು ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ.
‘ಅಂತಿಮವಾಗಿ ಸರ್ಕಾರ ಚೆನ್ನಾಗಿ ನಡೆಯಬೇಕು. ಎಲ್ಲಾ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂಬುದಷ್ಟೇ ನನ್ನ ಉದ್ದೇಶ’ ಎಂದು ಮಾಧ್ಯಮಗಳ ಎದುರು ಸಿಎಂ ಬಹಿರಂಗಪಡಿಸಿದ್ದಾರೆ.