Publish Date: Sun, 15 Sep 2019 (11:02 IST)
Updated Date: Sun, 15 Sep 2019 (11:03 IST)
ಬೆಂಗಳೂರು : ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೆರೆ ಪರಿಹಾರದಲ್ಲಿಯೂ ಕೀಳು ರಾಜಕಾರಣ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.
ಈ ಬಗ್ಗ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ನೆರೆ ಪರಿಹಾರದಲ್ಲಿಯೂ ಕೀಳು ರಾಜಕಾರಣ ಮಾಡುತ್ತಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ನಡೆ ಖಂಡನೀಯ. ನೆರೆಪೀಡಿತ ಪ್ರದೇಶಗಳ ಪ್ರತಿಯೊಬ್ಬರಿಗೂ ತಾರತಮ್ಯ ಮಾಡದೆ ಪರಿಹಾರ ಕೊಡುವುದು ಸರ್ಕಾರದ ಕರ್ತವ್ಯವಲ್ಲವೆ? ಎಂದು ಪ್ರಶ್ನಿಸಿದೆ.
ಅಲ್ಲದೇ ತಾವು ಬಿಜೆಪಿಗೆ ಮಾತ್ರ ಮುಖ್ಯಮಂತ್ರಿಯೇ? ಎಂದುಸಿಎಂ ವಿರುದ್ಧ ಕಿಡಿಕಾರಿದ ಕಾಂಗ್ರೆಸ್, ಬಿಜೆಪಿ ಶಾಸಕರ ಜೊತೆ ಮಾತ್ರ ನೆರೆ ಪರಿಹಾರ ಸಂಬಂಧವಾಗಿ ಸಭೆ ನಡೆಸಿರುವುದು ಪಕ್ಷಪಾತ ಮತ್ತು ಅಪರಾಧ ಎಂದು ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ.