Publish Date: Sun, 15 Sep 2019 (11:00 IST)
Updated Date: Sun, 15 Sep 2019 (11:02 IST)
ತುಮಕೂರು: ವಿಧಾನಸಭೆಯಲ್ಲಿ ಲಕ್ಷ್ಮಣ ಸವದಿ ನೀಲಿಚಿತ್ರ ವೀಕ್ಷಣೆ ವಿಚಾರ ದೇಶದ್ರೋಹ ಅಲ್ಲ ಎಂದ ಸಚಿವ ಮಾಧುಸ್ವಾಮಿ ಹೇಳಿಕೆಗೆ ಎಸ್.ಆರ್.ಶ್ರೀನಿವಾಸ್ ತಿರುಗೇಟು ನೀಡಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನದಲ್ಲಿ ನೀಲಿ ಚಿತ್ರ ವೀಕ್ಷಣೆ ಮಾಡುವುದು ಸರಿಯಾದ್ರೆ ಅವರು ವ್ಯಭಿಚಾರ ಮಾಡಲಿ. ಸವದಿ ನಡೆಯನ್ನ ಯಾರೂ ಸಮರ್ಥನೆ ಮಾಡಿಕೊಳ‍್ಳಲ್ಲ. ಬಿಜೆಪಿಯವರೇ ಸವದಿಯನ್ನ ಸಮರ್ಥನೆ ಮಾಡಿಕೊಳ್ಳಲೇಬೇಕು. ಹೀಗಾಗಿ ಸವದಿಯನ್ನು ಬಿಜೆಪಿಯವರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಎಂದು ಕಿಡಿಕಾರಿದ್ದಾರೆ.
ಬಿಜೆಪಿ ಸೇರ್ಪಡೆಯಾಗುವ ವಿಚಾರದ ಬಗ್ಗೆ ಮಾತನಾಡಿದ ಅವರು, ಬಿಜೆಪಿಗೆ ತಲೆಕೆಟ್ಟಿರೋರು ಹೋಗ್ತಾರೆ. ನಾನು ಬಿಜೆಪಿಗೆ ಹೋಗುವುದಿಲ್ಲ. ನಾನು ನನ್ನ ನಿಲುವನ್ನು ಹೆಚ್ ಡಿಕೆಗೆ ಹೇಳಿದ್ದೇನೆ. ಅನರ್ಹ ಶಾಸಕರು ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ದಿಕ್ಕೆಟ್ಟು ದಿವಾಳಿಯಾಗಿ ಫಕೀರರಾಗಿ ತಿರುಗುತ್ತಿದ್ದಾರೆ. ನಾನು ಯಾವತ್ತೂ ಫಕೀರನಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.