Publish Date: Mon, 13 Nov 2017 (14:20 IST)
Updated Date: Mon, 13 Nov 2017 (14:22 IST)
ಸಿಎಂ ಸಿದ್ದರಾಮಯ್ಯಗೆ ಹೆಣ್ಣಮಕ್ಕಳಿಲ್ಲ, ರಾಕ್ಷಸ ರಮೇಶ್‌ಕುಮಾರ್‌ಗೆ ಮಕ್ಕಳೇ ಇಲ್ಲ. ಇವರಿಗೆ ಯಾವ ಕಾನೂನು ಜಾರಿಗೆ ತರಬೇಕು.ಯಾವ ಕಾನೂನು ಜಾರಿಗೆ ತರಬಾರದು ಎನ್ನುವ ಪರಿಜ್ಞಾನವೇ ಇಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಬೆಳಗಾವಿ ಸುವರ್ಣಸೌಧಧ ಬಳಿಯಿರುವ ಖಾಸಗಿ ವೈದ್ಯರ ಪ್ರತಿಭಟನೆ ವೇದಿಕೆಯಲ್ಲಿ ಮಾತನಾಡಿದ ಅವರು, ಕೊಲೆಗಡುಕ ಸಚಿವ ರಮೇಶ್‌ಕುಮಾರ್‌ಗೆ ವೈದ್ಯರ ಯಾವ ಯಾವ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎನ್ನುವುದು ಗೊತ್ತಿಲ್ಲ ಎಂದು ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸರಕಾರದ ಕೆಪಿಎಂಇ ಮಸೂದೆ ಜಾರಿ ತೀರ್ಮಾನ ವಿರೋಧಿಸಿ ವೈದ್ಯರು ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಯಾವ ಪುರುಷಾರ್ಥಕ್ಕೆ ಸರಕಾರ ಇಂತಹ ಮಸೂದೆ ಮಂಡಿಸಲು ಮುಂದಾಗಿದೆ ಎಂದು ವಾಕ್‌ಪ್ರಹಾರ ನಡೆಸಿದ್ದಾರೆ.
.
ಸರಕಾರ ಯಾವುದೇ ಕಾರಣಕ್ಕೂ ಖಾಸಗಿ ವೈದ್ಯರ ಮರಣಶಾಸನವಾದ ಮಸೂದೆಯನ್ನು ಮಂಡಿಸಲು ಬಿಡುವುದಿಲ್ಲ ಎಂದು ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಗುಡುಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.