Select Your Language

Notifications

webdunia
webdunia
webdunia
webdunia

ಕುಂದಾಪುರ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಹೈಡ್ರಾಮಾ

webdunia
ಕುಂದಾಪುರ: , ಸೋಮವಾರ, 13 ನವೆಂಬರ್ 2017 (14:07 IST)
ಕುಂದಾಪುರ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಹೈಡ್ರಾಮಾ ನಡೆದಿದ್ದು, ಹಾಲಾಡಿ ಬಣ ಮತ್ತು ಬಿಜೆಪಿ ಬಣದ ಮಧ್ಯೆ ಭಾರಿ ಚಕಮಕಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಹಾಲಾಡಿ ಶ್ರೀನಿವಾಸ್‌ ಶೆಟ್ಟಿಯನ್ನು ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳಿಸಬಾರದು ಎಂದು ಒತ್ತಾಯಿಸಿದ ಬಿಜೆಪಿ ಬಣ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭಾಷಣಕ್ಕೆ ತೀವ್ರವಾಗಿ ಅಡ್ಡಿಪಡಿಸಿತು.
 
ಉಭಯ ಬಣಗಳ ನಡುವಿನ ಜಟಾಪಟಿ ಪರಿಸ್ಥಿತಿ ವಿಕೋಪಕ್ಕೆ ತೆರಳಿದ್ದರಿಂದ ಪೊಲೀಸರು ಲಾಠಿ ಚಾರ್ಜ್ ಮಾಡಿ ಕಾರ್ಯಕರ್ತರನ್ನು ಚದುರಿಸಿದ್ದಾರೆ.
 
ಪರಿವರ್ತನೆ ಯಾತ್ರೆಯಲ್ಲಿದ್ದ ಹಲವು ನಾಯಕರು ಬಿಜೆಪಿ ಕಾರ್ಯಕರ್ತರಿಗೆ ಶಾಂತರಾಗುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಉಭಯ ಬಣಗಳ ವಾಗ್ವಾದ ಯಾತ್ರೆಗೆ ಅಡ್ಡಿಪಡಿಸಿತು ಎಂದು ಮಾಧ್ಯಮಗಳು ವರದಿ ಮಾಡಿವೆ.  
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಅವರಿಲ್ಲ,..ಒಳಗೆ ಬಾ ಅಂದ್ಳು.. ನಂತ್ರ ಪತಿ ಬಂದ...!!