Publish Date: Sat, 05 Oct 2019 (20:01 IST)
Updated Date: Sat, 05 Oct 2019 (20:03 IST)
ಒಂದೆಡೆ ನೆರೆ ಪ್ರವಾಹದಿಂದ ತಮ್ಮ ಬದುಕನ್ನೇ ಕಳೆದುಕೊಂಡಿದ್ದ ಜನರು ಇದೀಗ ರಾಜ್ಯದ ಮುಖ್ಯಮಂತ್ರಿಯ ಮಾತಿನಿಂದ ಇನ್ನೊಂದೆಡೆ ಕುಗ್ಗಿ ಹೋಗುವ ಪರಿಸ್ಥಿತಿಗೆ ಬಂದಿದ್ದಾರೆ.
ಕೃಷ್ಣಾ ನದಿ ಪ್ರವಾಹದಿಂದ ತತ್ತರಿಸಿದ ಕೃಷ್ಣಾ ನದಿ ತೀರದ ಗೌಡುರು ಗ್ರಾಮಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿದ್ರು.
ಸಂತ್ರಸ್ತರ ಗೋಳು ಆಲಿಸಿದ ಸಿಎಂ ಬಿಎಸ್ ವೈ, ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೌಡುರು ಗ್ರಾಮದ ಜನರ ಮನವಿ ಕೇಳಿದ್ರು.
ಕೃಷ್ಣಾ ನದಿ ಪ್ರವಾಹದಿಂದ ಪದೇ ಪದೇ ನರಕಯಾತನೆಯಲ್ಲೇ ಜೀವನ ನಡೆಸುತ್ತಿದ್ದೇವೆ. ಗ್ರಾಮ ಸ್ಥಳಾಂತರ ಮಾಡಿ ಸಮಸ್ಯೆಗೆ ಶಾಶ್ವತವಾಗಿ ಮುಕ್ತಿ ಕಲ್ಪಿಸಿ ಎಂದು ಸಿಎಂಗೆ ಸಂತ್ರಸ್ತರು ಅಳಲು ತೋಡಿಕೊಂಡರು. ಗ್ರಾಮ ಸ್ಥಳಾಂತರ ಮಾಡುತ್ತೇವೆ ಅಂತ ಸರಕಾರದಿಂದ ಭರವಸೆ ಕೊಟ್ಟು ಹೋಗಿ ಅಂತ ಕೈಮುಗಿದು ಮನವಿ ಮಾಡಿದರು ಸಂತ್ರಸ್ತರು.
ಆದರೆ ಸಂತ್ರಸ್ತರಿಗೆ ಭರವಸೆ ನೀಡದೆ, ನಾವು ಅದಕ್ಕೆ ಬಂದಿದ್ದೇವೆ ಎಂದು ಹಾರಿಕೆ ಉತ್ತರ ಕೊಟ್ಟು ತೆರಳಿದರು ಸಿಎಂ.