Select Your Language

Notifications

webdunia
webdunia
webdunia
webdunia

ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಒತ್ತುವರಿ ತೆರವು

ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಒತ್ತುವರಿ ತೆರವು
ಬಿಬಿಎಂಪಿ ಮಹದೇವಪುರ ವಲಯ ವ್ಯಾಪ್ತಿಯಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಮುಂದುವರಿಸಲಾಗಿದ್ದು, ಇಂದು ಪಟ್ಟಂದೂರು ಅಗ್ರಹಾರ ವ್ಯಾಪ್ತಿಯಲ್ಲಿ 1 ಒತ್ತುವರಿಯ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಗರುಡಾಚಾರ್ ಪಾಳ್ಯ ವಾರ್ಡ್ ನ ಪಟ್ಟಂದೂರು ಅಗ್ರಹಾರದ ವ್ಯಾಪ್ತಿಯಲ್ಲಿ ಬರುವ ಫಾಯರ್ ಇನ್ಫಿನಿಟಿ ಅಪಾರ್ಟ್ಮೆಂಟ್ ನಿಂದ ಸುಮಾರು 300 ಮೀಟರ್ ಉದ್ದದ ರಾಜಕಾಲುವೆ ಭಾಗದಲ್ಲಿ ನಿರ್ಮಿಸಿದ್ದ ಕಾಂಪೌಂಡ್ ಗೋಡೆಯನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಗಿದೆ. ಈ ವೇಳೆ ಪಾಲಿಕೆಯ ವಾರ್ಡ್ ಇಂಜಿನಿಯರ್, ಬೃಹತ್ ನೀರುಗಾಲುವೆಯ ಇಂಜಿನಿಯರ್, ಪೊಲೀಸ್ ಅಧಿಕಾರಿಗಳು, ಭೂಮಾಪಕರು ಹಾಗೂ ಇನ್ನಿತರೆ ಸಂಬಂಧ ಅಧಿಕಾರಿಗಳು ಉಪಸ್ಥಿತರಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಡಿಕೆಶಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಜಾರಕಿಹೊಳಿ ವೈಯಕ್ತಿಕ ದ್ವೇಷ ತೋರುತ್ತಿದ್ದಾರೆ