Daily Horoscope
✕

ಬಿಎಸ್ ವೈ ಮತ್ತು ಸಂತೋಷ್ ಬಣದ ನಡುವೆ ತಿಕ್ಕಾಟ..!

Webdunia
ಶನಿವಾರ, 17 ಜೂನ್ 2023 (18:34 IST)
ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ.. ವಿಧಾನಸಭೆಯ‌ ಸೋಲಿನ ನಂತ್ರ ನಾಯಕರು ಒಳಗೊಳಗೆ ಕತ್ತಿ‌ಮಸೆಯೋಕೆ ಶುರುಮಾಡಿದ್ದಾರೆ.. ಸಂಸದ ಪ್ರತಾಪ್ ಸಿಂಹ ಹೊಡೆದ ಮಾತಿನ ಗುಂಡು ಮಾಜಿ ಸಿಎಂ ಬಿಎಸ್ ವೈ ಹಾಗೂ ಅವರ ಶಿಷ್ಯ ಬೊಮ್ಮಾಯಿಯವರ ಎದೆಗೆ ಬಿದ್ದಿದೆ.. ಹೀಗಾಗಿ ಲಿಂಗಾಯತ ವರ್ಸಸ್ ಸಂಘಪರಿವಾರ ಎಂಬ ಹೊಸ ಬೀಜ ಕಾದಟ ಆರಂಭವಾಗಿದೆ.. ಕಾಂಗ್ರೆಸ್ ನಾಯಕರ ಜೊತೆ ಹೊಂದಾಣಿಕೆ ರಾಜಕಾರಣದಿಂದಾಗಿಯೇ ಸೋಲಾಯ್ತು ಅನ್ನೋದನ್ನ ಯಡಿಯೂರಪ್ಪ ಹಾಗೂ ಬೊಮ್ಮಾಯಿ ತಲೆಗೆ ಕಟ್ಟೋಕೆ ಸಂತೋಷ್ ಬಣ ಪ್ರಯತ್ನ ನಡೆಸಿದೆ.. ಹಾಗಾಗಿಯೇ ಅದಕ್ಕೆ ಪ್ರತಾಪ್ ಸಿಂಹ,ಸಿ.ಟಿ.ರವಿಯಂತವರನ್ನ ಬಳಸಿಕೊಳ್ಳಲಾಗ್ತಿದೆ ಎಂಬ ಚರ್ಚೆಗಳು ಶುರುವಾಗಿವೆ.. ಹಾಗಾಗಿ ಬಿಎಸ್ ವೈ ಬಣ ಇದೀಗ ತಿರುಗಿಬಿದ್ದಿದೆ.

ಇನ್ನು ಹೊಂದಾಣಿಕೆ ರಾಜಕಾರಣದಿಂದ ಸೋಲಾಯ್ತು ಅನ್ನೋ ಪ್ರತಾಪ್ ಸಿಂಹ ಹೇಳಿಕೆಯಿಂದ ಮಾಜಿ ಸಿಎಂಗಳಿಬ್ಬರು ಕೆರಳಿ ಕೆಂಡವಾಗಿದ್ದಾರೆ.. ಪಕ್ಷದೊಳಗೆಯೇ ನಮ್ಮನ್ನ ರಾಜಕೀಯವಾಗಿ ಮುಗಿಸೋಕೆ ಹೊರಟಿದ್ದಾರೆಂದು ಬೇಸರಗೊಂಡಿದ್ದಾರೆ.. ಚುನಾವಣೆಯಲ್ಲಿ ನಮ್ಮ ಸಲಹೆಗಳನ್ನ ಕೇಳದೆ, ತಮಗಿಷ್ಟ ಬಂದಂತೆ ನಿರ್ಧಾರ ತೆಗೆದುಕೊಂಡು,ಈಗ ನಮ್ಮನ್ನೇ ಹೊಣೆಗಾರರನ್ನಾಗಿ ಬಿಂಬಿಸೋಕೆ ಹೊರಟಿದ್ದಾರೆಂದು ಆಕ್ರೋಶ‌ಗೊಂಡಿದ್ದಾರೆ.. ಹೀಗಾಗಿ ತಮ್ಮ ಆಪ್ತ ಬೆಂಬಲಿಗರನ್ನ ಮುಂದೆ ಬಿಟ್ಟು ಸಂತೋಷ್,ಪ್ರಹ್ಲಾದ್ ಜೋಶಿಯವರ ವಿರುದ್ಧ ದೂರು ಕೊಡಿಸಲು ಪ್ರಯತ್ನ ನಡೆಸಿದ್ದಾರೆ.. ಈ ಮೂಲಕ ಬಿ.ಎಲ್.ಸಂತೋಷ್ ಅಟಾಟೋಪಗಳಿಗೆ ಬ್ರೇಕ್ ಹಾಕಲು ಬಿಎಸ್ ವೈ ಹಾಗೂ ಬೊಮ್ಮಾಯಿ ಮುಂದಾಗಿದ್ದಾರೆಂಬ ಪಕ್ಷದೊಳಗೆ ಚರ್ಚೆ ನಡೆಯುತ್ತಿದೆ..

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅತಿಯಾದ ಆಲೋಚನೆಯಿಂದ ಮುಕ್ತಿ ಪಡೆಯುವುದು ಹೇಗೆ: ಗುರು ಶ್ರೀ ಶ್ರೀ ರವಿ ಶಂಕರ್ ನೀಡಿದ ಸರಳ ಸೂತ್ರಗಳು

ನಮಗ್ಯಾಕೆ ತೊಂದರೆ ಕೊಡಬೇಕು..: ವಿಮಾನದಲ್ಲಿ ಅಭಿಜಿತ್ ದೀಪ್ಕೆ ವರ್ತನೆಗೆ ಬೇಸತ್ತ ಸಹಯಾತ್ರಿಕರ ಆಕ್ರೋಶ Video

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಆಯಸ್ಸು ಗಟ್ಟಿಯಿತ್ತು ಅದಕ್ಕೇ ಬದುಕಿಕೊಂಡ ಯುವತಿ: ಟ್ರಕ್ ಬಂಪರ್ ಹಿಡಿದು ನೇತಾಡಿದ ವಿಡಿಯೋ ವೈರಲ್

ಅರೆಸ್ಟ್ ಮಾಡ್ರೋ ನನ್ನ… ವಿಮಾನದಲ್ಲೇ ಪೊಲೀಸರು, ಅಭಿಜಿತ್ ದೀಪ್ಕೆ ನಡುವೆ ಹೈಡ್ರಾಮಾ Video

ಮುಂದಿನ ಸುದ್ದಿ
Show comments