Publish Date: Mon, 27 Feb 2023 (19:15 IST)
Updated Date: Mon, 27 Feb 2023 (19:18 IST)
ರಾಮದುರ್ಗ ವಿಧಾನಸಭಾ ಕ್ಷೇತ್ರ ಟಿಕೇಟ್ಗಾಗಿ ಇಬ್ಬರು ನಾಯರು ಪೈಪೊಟಿ ನಡೆಸಿದ್ದರು. ಇಂದು ಸಿದ್ದರಾಮಯ್ಯ ನಿವಾಸದಲ್ಲಿ ಇಬ್ಬರು ನಾಯಕರನ್ನು ಕರೆಸಿ ಸಿದ್ದರಾಮಯ್ಯ ಸಂಧಾನ ಮಾಡಿಸಿದರು. ಈ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ಅವರು ಚಿಕ್ಕ ರೇವಣ್ಣ ಕೆಲಸ ಮಾಡಿಕೊಂಡ ಬರ್ತಾ ಇದ್ರು.ದುಡ್ಡು ಖರ್ಚು ಮಾಡಿ ಸಂಘಟನೆ ಮಾಡ್ತಾ ಇದ್ರು.ಈ ಬಾರಿ ಟಿಕೆಟ್ ಬೇಕು ಅಂತ ಕೆಲಸ ಮಾಡ್ತಾ ಇದ್ರು ನಾನು ರೇವಣ್ಣ ಕರೆದು ಮಾತನಾಡಿದೆ.ಈ ಬಾರಿ ಅಶೋಕ್ ಪಟ್ಟಣ್ ಗೆ ಟಿಕೆಟ್ ಕೋಡೋಣ.ಗೆಲ್ಲಲು ಕೆಲಸ ಮಾಡೋಣ ಅಂತ ಹೇಳಿದ್ದೇನೆ.ಮುಂದೆ ಅವಕಾಶದ ಬಗ್ಗೆ ಹೇಳಿದ್ದೇನೆ ಇದಕ್ಕೆ ಚಿಕ್ಕ ರೇವಣ್ಣ ಒಪ್ಪಿಕೊಂಡಿದ್ದಾರೆ ಎಂಂದು ಹೇಳಿದರು.ಇನ್ನೂ ಸಾಬರಿಗೆ ಓಟ್ ಹಾಕಬೇಡಿ ಎಂಬ ಯತ್ನಾಳ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ ಈ ಬಾರಿ ಯತ್ನಾಳ್ ಗೆಲ್ಲಲ್ಲ ಎಂದು ಯತ್ನಾಳ್ ಗೆ ಸಿದ್ದರಾಮಯ್ಯ ತಿರುಗೇಟು ನೀಡಿದರು.
geetha
Publish Date: Mon, 27 Feb 2023 (19:15 IST)
Updated Date: Mon, 27 Feb 2023 (19:18 IST)