Select Your Language

Notifications

webdunia
webdunia
webdunia
webdunia

ಸುಳ್ಳು ಹೇಳಿದ್ದು ಸಿದ್ದರಾಮಯ್ಯ ನಾನಲ್ಲ : ಸಿದ್ದು ಮೇಲೆ ಸಿಎಂ ಗರಂ

ಸುಳ್ಳು ಹೇಳಿದ್ದು ಸಿದ್ದರಾಮಯ್ಯ ನಾನಲ್ಲ
ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸುಳ್ಳು ಹೇಳಿದ್ದಾರೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸುಳ್ಳು ಹೇಳಿದ್ದು ಅವರು, ನಾನಲ್ಲ ಎಂದು ತಿರುಗೇಟು ನೀಡಿದ್ದಾರೆ.ವಿಧಾನಸೌಧದಲ್ಲಿ ಮಾತನಾಡಿದ ಅವರು, ಅರ್ಕಾವತಿ ಬಡಾವಣೆ ರೀಡೂ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಕಟುಸತ್ಯ ಎದುರಿಸುವ ಕಾಲ ಬಂದಿದೆ. ಅರ್ಕಾವತಿ ರೀಡೂ ಬಗ್ಗೆ ಬೊಮ್ಮಾಯಿ ಹೇಳ್ತಿರೋದಲ್ಲ, ನ್ಯಾ.ಕೆಂಪಣ್ಣ ಅವರೇ ಈ ಬಗ್ಗೆ ಹೇಳಿದ್ದಾರೆ...ಸುಳ್ಳು ಹೇಳುತ್ತಿರುವುದು ನಾನಲ್ಲ, ಸಿದ್ದರಾಮಯ್ಯನವರು. ನ್ಯಾ. ಕೆಂಪಣ್ಣ ಅವರ ಆದೇಶದಲ್ಲಿ ಸ್ಪಷ್ಟವಾಗಿದೆ. ಅದನ್ನು ನಾನು ಹೇಳಿದ್ದೇನೆ. ಆದೇಶದಲ್ಲಿ ಏನು ಬಂತು ಅದು ಮುಖ್ಯ ಅಲ್ವಾ? ಈ ಬಗ್ಗೆ ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಕೈಗೊಳ್ತೀವಿ ಎಂದು ವಾಗ್ದಾಳಿ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾರ್ಚ್ 25 ಕ್ಕೆ ರಾಜ್ಯದಲ್ಲಿ ನಮೋ ಮೆಗಾ ರ್ಯಾಲಿ