Select Your Language

Notifications

webdunia
webdunia
webdunia
webdunia

ಜಾಮೀನು ಪಡೆದು ಹೊರಬಂದ ಬೆನ್ನಲ್ಲೇ ಸಿಟಿ ರವಿ ಟೆಂಪಲ್ ರನ್

Minister Lakshmi Hebbalkar, MLC CT Ravi Temple Run, Lakshmi Hebbalkar and CT Ravi Fight

Sampriya

ಚಿಕ್ಕಮಗಳೂರು , ಭಾನುವಾರ, 22 ಡಿಸೆಂಬರ್ 2024 (12:44 IST)
Photo Courtesy X
ಚಿಕ್ಕಮಗಳೂರು: ಮಾನನಷ್ಟೆ ಮೊಕದ್ದಮೆ ಪ್ರಕರಣದಲ್ಲಿ ಜಾಮೀನು ಪಡೆದು ಬಿಡುಗಡೆಯಾಗಿರುವ ಎಂಎಲ್‌ಸಿ ಸಿ.ಟಿ.ರವಿ ಅವರು ಪತ್ನಿ ಜೊತೆಗೆ ಟೆಂಪಲ್‌ ರನ್‌ ಮಾಡಿದ್ದಾರೆ. ರಾಘವೇಂದ್ರ ಸ್ವಾಮಿಗೆ ದೀರ್ಘದಂಡ ನಮಸ್ಕಾರ ಹಾಕಿ ಸಿ.ಟಿ.ರವಿ ಭಕ್ತಭಾವ ಮೆರೆದರು.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸದನದಲ್ಲಿ ಆಕ್ಷೇಪಾರ್ಹ ಪದ ಬಳಕೆ ಆರೋಪದಲ್ಲಿ ಬಂಧನಕ್ಕೊಳಗಾಗಿ ನಂತರ ಬಿಡುಗಡೆಯಾದ ನಂತರ ಚಿಕ್ಕಮಗಳೂರಿಗೆ ಶನಿವಾರ ವಾಪಸ್‌ ಆದರು. ತವರಿಗೆ ಮರಳಿದ ಕೂಡಲೇ ಪತ್ನಿ ಜೊತೆ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

ನಗರದ ರಾಘವೇಂದ್ರ ಸ್ವಾಮಿ ಮಠಕ್ಕೆ ತೆರಳಿ ದಂಪತಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸಿ.ಟಿ.ರವಿ ಬಿಡುಗಡೆಗೆ ಹಲವರು ಹರಕೆ ಹೊತ್ತಿದ್ದರು. ರಾತ್ರಿ ಆಗಮಿಸಿದಾಗ ಹಲವು ಕಾರ್ಯಕರ್ತರು ಹರಕೆ ಹೊತ್ತಿದ್ದ ಬಗ್ಗೆ ಮಾಹಿತಿ ಲಭಿಸಿತ್ತು.

ಪತ್ನಿ, ಕಾರ್ಯಕರ್ತರ ಜೊತೆ ತೆರಳಿ ರಾಘವೇಂದ್ರ ಸ್ವಾಮಿಗೆ ಸಿ.ಟಿ.ರವಿ ಪೂಜೆ ಸಲ್ಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಾಲಾ ಶೈಕ್ಷಣಿಕ ಪ್ರವಾಸದ ವೇಳೆ ವಿದ್ಯಾರ್ಥಿ ಸಾವು: ಮುಖ್ಯಶಿಕ್ಷಕ ಸೇರಿ 6 ಶಿಕ್ಷಕರು ಸಸ್ಪೆಂಡ್‌