Select Your Language

Notifications

webdunia
webdunia
webdunia
webdunia

ಬಿಜೆಪಿಯವರು ಸಿಟಿ ರವಿಗೆ ಬೆಂಬಲಿಸುವರಿಂದ ಹೆಣ್ಣುಮಕ್ಕಳಿಗೆ ಅವಮಾನ ಮಾಡುತ್ತಿದೆ: ಸಿಎಂ

MLC CT Ravi Arrest, Chief Minister Siddaramaiah, Minister Lakshmi Hebbalkar

Sampriya

ಬೆಂಗಳೂರು , ಶುಕ್ರವಾರ, 20 ಡಿಸೆಂಬರ್ 2024 (17:10 IST)
ಬೆಂಗಳೂರು: ಸಿ.ಟಿ ರವಿ ಬಂಧನ ವಿರೋಧಿಸಿ ಬಿಜೆಪಿ ಪಕ್ಷ ಪ್ರತಿಭಟನೆ ಮಾಡುವ ಮೂಲಕ ಹೆಣ್ಣುಮಕ್ಕಳಿಗೆ ಅವಹೇಳನಕಾರಿಯಾಗಿ ಮಾತನಾಡುವುದನ್ನು ಬೆಂಬಲಿಸುತ್ತಿದ್ದಾರೆ. ಸಿ.ಟಿ.ರವಿಯವರು ಕೀಳುಭಾಷೆ ಬಳಸಿದ್ದು ಸುಳ್ಳಾದರೆ ಅವರ ಬಂಧನವೇಕಾಯಿತು? ಸಾಮಾನ್ಯವಾಗಿ ಇಂತಹ ಆರೋಪಗಳ ಬಗ್ಗೆ  ಹೆಣ್ಣುಮಕ್ಕಳು ಸುಳ್ಳು ದೂರು ಕೊಡಲು ಸಾಧ್ಯವಿಲ್ಲ. ಸಿ.ಟಿ. ರವಿಯವರು ಅವಾಚ್ಯ ಪದ ಏಕೆ ಬಳಸಿದರೆಂದು ನನಗೆ ತಿಳಿದಿಲ್ಲ. ಆದರೆ ಇದೊಂದು ಗಂಭೀರ ಸ್ವರೂಪದ ಅಪರಾಧ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಮಂಡ್ಯದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ ಮಾತನಾಡಿದ್ದಾರೆ.

ಸಿ.ಟಿ.ರವಿಯವರು ತಾವು 'ಪ್ರಸ್ಟ್ರೇಷನ್' ಪದ ಬಳಸಿರುವುದಾಗಿ ತಿಳಿಸಿದ್ದಾರೆ. ಆದರೆ ಅವಾಚ್ಯ ಪದ ಬಳಸಿರುವುದು ನಿಜವೆಂದು ಸಚಿವರು ಹೇಳಿದ್ದಾರೆ. ಕೀಳು ಪದಬಳಕೆಯನ್ನು ಕೇಳಿರುವುದಾಗಿ ಅಲ್ಲಿಯೇ
ಇದ್ದ ಇತರ ಸದಸ್ಯರೂ ಹೇಳಿದ್ದಾರೆ. ಸಭಾಪತಿಯವರು ಪೀಠದಿಂದ ಹೊರನಡೆದ ನಂತರ ನಡೆದಿರುವ ಘಟನೆ ಬಗ್ಗೆ ಆಡಿಯೋ ಮತ್ತು ವಿಡಿಯೋ ಇದೆ ಎಂದೂ ಹಲವರು ಹೇಳುತ್ತಿದ್ದು, ಪದಬಳಕೆಯಾಗಿರುವುದು ಸತ್ಯ.

ಸಿ.ಟಿ ರವಿಯವರು ಎಸಗಿರುವ ಅಪರಾಧ ಕೃತ್ಯಕ್ಕೆ ಅನುಗುಣವಾಗಿ ಕಾನೂನಿನ ಕ್ರಮ ಜರುಗಿಸಬೇಕಾಗುತ್ತದೆ. ಬೆಳಗಾವಿಯಲ್ಲಿ ಜನರ ಆಕ್ರೋಶದಿಂದ ಸಿ.ಟಿ.ರವಿಯವರನ್ನು ರಕ್ಷಿಸಲು ಖಾನಾಪುರಕ್ಕೆ ಅವರನ್ನು ಕರೆತರಲಾಗಿತ್ತು.


Share this Story:

Follow Webdunia kannada

ಮುಂದಿನ ಸುದ್ದಿ

ಸಿಟಿ ರವಿಯನ್ನು ಕೊಲೆಗಡುಕ ಎಂದ ಲಕ್ಷ್ಮೀ ಹೆಬ್ಬಾಳ್ಕರ್‌, ಬೆಂಬಲಿಗರನ್ನು ಅರೆಸ್ಟ್ ಮಾಡಿ: ಜನಾರ್ದನ ರೆಡ್ಡಿ