ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧದ ಪದಬಳಕೆ ಲೈಂಗಿಕ ದೌರ್ಜನ್ಯಕ್ಕೆ ಸಮ: ಸಿಎಂ ಸಿದ್ದರಾಮಯ್ಯ

Select Your Language

Notifications

webdunia
webdunia
webdunia
रविवार, 29 दिसंबर 2024
webdunia

ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧದ ಪದಬಳಕೆ ಲೈಂಗಿಕ ದೌರ್ಜನ್ಯಕ್ಕೆ ಸಮ: ಸಿಎಂ ಸಿದ್ದರಾಮಯ್ಯ

Chief Minister Siddaramaiah, Karnataka Minister Lakshmi Hebbalkar, BJP Leader CT Ravi
, ಗುರುವಾರ, 19 ಡಿಸೆಂಬರ್ 2024 (17:19 IST)
Photo Courtesy X
ಬೆಂಗಳೂರು: ಸಚಿವೆ  ಲಕ್ಷ್ಮೀ ಹೆಬ್ಬಾಳ್ಕರ್  ಅವರಿಗೆ ಅವಾಚ್ಯ ಪದ ಬಳಕೆ ಮಾಡಿರುವ ಬಗ್ಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿಯವರ ವಿರುದ್ಧ ಸಭಾಪತಿಯವರಿಗೂ ಹಾಗೂ ಪೊಲೀಸ್ ಠಾಣೆಗೂ ದೂರು ಸಲ್ಲಿಸಿರುವ ಮಾಹಿತಿ ದೊರೆತಿದ್ದು,  ಪೊಲೀಸರು ಈ ಕ್ರಿಮಿನಲ್ ಅಪರಾಧ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಅವರು ಇಂದು ಸುವರ್ಣ ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಸಿಟಿ ರವಿಯವರು ಅವಾಚ್ಯ ಪದ ಬಳಕೆಯನ್ನು ಅಲ್ಲಗಳೆದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಅವರು ಅವಾಚ್ಯ ಪದ ಬಳಸಿದ್ದಾರೆಂದು ಹಲವು ಸದಸ್ಯರು ಹೇಳುತ್ತಿದ್ದು, ತಾನು ವಿಧಾನಪರಿಷತ್ತಿನಲ್ಲಿ ಇರಲಿಲ್ಲ ಎಂದು ತಿಳಿಸಿದರು.


ಇಂತಹ ಪದಪ್ರಯೋಗದಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮನನೊಂದಿದ್ದು, ಇಂತಹ ಪದಬಳಕೆ ಒಂದು ರೀತಿಯ ಲೈಂಗಿಕ ದೌರ್ಜನ್ಯವಾಗಿದೆ. ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಸಿ. ಟಿ.ರವಿ ಅವರು  ಆರೋಪವನ್ನು ಅಲ್ಲಗಳೆದಿರುವ  ಬಗ್ಗೆ ಪ್ರತಿಕ್ರಿಯೆ ನೀಡಿ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಅಮಿತ್ ಶಾ ಹೇಳಿಕೆಯಿಂದ ಬಿಜೆಪಿಯ ಅಂತರಂಗದ ಮಾತು ಹೊರಬಿದ್ದಿದೆ: ಸಿಎಂ ಸಿದ್ದರಾಮಯ್ಯ