ಬೆಂಗಳೂರು: ಶಾಲಾ ಪ್ರವಾಸಕ್ಕೆಂದು ಬೆಳಗಾವಿಯ ಸುವರ್ಣಸೌಧಕ್ಕೆ ಭೇಟಿನೀಡಿದ ಮಕ್ಕಳಿಗೆ ಹನ್ನೆರಡನೆಯ ಶತಮಾನದಲ್ಲಿಯೇ ಪ್ರಜಾಪ್ರಭುತ್ವ ಪರಿಕಲ್ಪನೆಯ ಮೇಲೆ ರೂಪುಗೊಂಡಿದ್ದ ಅನುಭವ ಮಂಟಪದ ಬಗ್ಗೆ ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಶಾಲಾ ಪ್ರವಾಸಕ್ಕೆಂದು ಬೆಳಗಾವಿಯ ಸುವರ್ಣಸೌಧಕ್ಕೆ ಭೇಟಿನೀಡಿದ ಮಕ್ಕಳಿಗೆ ಹನ್ನೆರಡನೆಯ ಶತಮಾನದಲ್ಲಿಯೇ ಪ್ರಜಾಪ್ರಭುತ್ವ ಪರಿಕಲ್ಪನೆಯ ಮೇಲೆ ರೂಪುಗೊಂಡಿದ್ದ ಅನುಭವ ಮಂಟಪದ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ವಿವರಿಸಿದರು.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವರು ಬರೆದುಕೊಂಡಿದ್ದಾರೆ. ಅಂದು ಶರಣರು ಸಾರಿದ ಸಮಾನತೆ, ಜಾತ್ಯತೀತತೆ, ಸಹಬಾಳ್ವೆ, ವ್ಯಕ್ತಿ ಸ್ವಾತಂತ್ರ್ಯ ಘನತೆಯ ಬದುಕಿನ ಹಕ್ಕುಗಳು ಇಂದು ನಮ್ಮ ಸಂವಿಧಾನದ ಆಶಯಗಳಾಗಿವೆ. ಇವು ಪ್ರತಿಯೊಬ್ಬರ ಆಶಯಗಳಾಗಬೇಕು.
ವಿಶ್ವಮಾನವರಾಗಿ ಹುಟ್ಟುವ ಮಕ್ಕಳು ಜಾತಿ, ಧರ್ಮ, ವರ್ಣ, ಕಂದಾಚಾರ ಮುಂತಾದ ಸಂಕುಚಿತ ಚಿಂತನೆಯ ಪ್ರಭಾವಕ್ಕೆ ಒಳಗಾಗಿ ಅಲ್ಪಮಾನವರಾಗುತ್ತಿದ್ದಾರೆ.
ಮಹಾಪುರುಷರ ಜೀವನಾದರ್ಶಗಳನ್ನು ಮಕ್ಕಳಿಗೆ ಬಾಲ್ಯದಲ್ಲಿಯೇ ತಿಳಿಸುವ ಮೂಲಕ ಅವರನ್ನು ಈ ಜಾತಿ, ಧರ್ಮ, ಮೂಢನಂಬಿಕೆಗಳ ಅಲ್ಪತನದಿಂದ ಮುಕ್ತಗೊಳಿಸಿ ವಿಶ್ವಮಾನವರನ್ನಾಗಿಸೋಣ.