Select Your Language

Notifications

webdunia
webdunia
webdunia
webdunia

ತಂದೆಯ ನಿರ್ಲಕ್ಷ್ಯಕ್ಕೆ ಮಗು ಬಲಿ: ಸೇದಿ ಬಿಸಾಡಿದ್ದ ಬೀಡಿ ತುಂಡು ನುಂಗಿ ಕಂದಮ್ಮ ಸಾವು

Mangalore Police, No Smoking, Wenlock Hospital

Sampriya

ಮಂಗಳೂರು , ಮಂಗಳವಾರ, 17 ಜೂನ್ 2025 (14:41 IST)
Photo Credit X
ಮಂಗಳೂರು: ತಂದೆ ಅರ್ಧ ಸೇದಿ ಬಿಸಾಡಿದ್ದ ಬೀಡಿಯ ತುಂಡನ್ನು ನುಂಗಿ ಅಸ್ವಸ್ಥಗೊಂಡಿದ್ದ ಹತ್ತು ತಿಂಗಳ ಮಗವೊಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ.

ಮಂಗಳೂರು ಸಮೀಪದ ಅಡ್ಯಾರ್‌ನಲ್ಲಿ ವಾಸಿಸುತ್ತಿದ್ದ ಬಿಹಾರ ಮೂಲದ ದಂಪತಿ ಪುತ್ರ ಅನೀಶ್‌ ಎಂಬ ಮಗು ಮೃತಪಟ್ಟಿದೆ.  ಬೀಡಿ ತುಂಡು ಗಂಟಲಲ್ಲಿ ಸಿಲುಕಿಕೊಂಡು ಅಸ್ವಸ್ಥಗೊಂಡಿದ್ದ ಮಗು ಚಿಕಿತ್ಸೆ ಫಲಿಸದೇ ವೆನ್ಲಾಕ್‌ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದೆ.

ನೆಲದಲ್ಲಿ ಬಿದ್ದಿದ್ದ ಬೀಡಿ ತುಂಡನ್ನು ಮಗು ನುಂಗಿತ್ತು. ಸ್ವಲ್ಪ ಹೊತ್ತಲ್ಲೇ ಅಸ್ವಸ್ಥಗೊಂಡ ಮಗುವನ್ನು ಮನೆಯವರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಸ್ಪಂದಿಸಲಿಲ್ಲ. ಈ ಸಂಬಂಧ ಮಂಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ತನ್ನ ಗಂಡನ ನಿರ್ಲಕ್ಷ್ಯದಿಂದಲೇ ಬೀಡಿಯ ತುಂಡನ್ನು ನುಂಗಿ ಅಸ್ವಸ್ಥಗೊಂಡು ಮಗು ಮೃತಪಟ್ಟಿದೆ. ಮನೆಯೊಳಗೆ ಬೀಡಿ ಸೇದಿ ಬಿಸಾಡದಂತೆ ಗಂಡನಿಗೆ ಹಲವು ಬಾರಿ ಎಚ್ಚರಿಸಿದ್ದರೂ ಮತ್ತೆ ಎಸೆದ ಪರಿಣಾಮ ಮಗು ಪ್ರಾಣ ಕಳೆದುಕೊಂಡಿದೆ ಎಂದು ಮಗುವಿನ ತಾಯಿ ಲಕ್ಷ್ಮಿ ದೇವಿ ದೂರು ನೀಡಿದ್ದಾರೆ. 


Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಮನೆಗೆ ಮುತ್ತಿಗೆ ಹಾಕಲೆತ್ನಿಸಿದ ಬಿಜೆಪಿ ನಾಯಕರ ಬಂಧನ