Select Your Language

Notifications

webdunia
webdunia
webdunia
webdunia

ಸಾವಿನಲ್ಲೂ ಸಾರ್ಥಕತೆ ಮೆರೆದ ಶಿವಮೊಗ್ಗದ ಮಹಿಳೆ: ಹೊಸ ದಾಖಲೆ ನಿರ್ಮಿಸಿದ ವೆನ್ಲಾಕ್‌ ಸರ್ಕಾರಿ ಆಸ್ಪತ್ರೆ

Wenlock Hospital, Organ Donation Process, Shimoga Ragiguddeya Rekha

Sampriya

ಮಂಗಳೂರು , ಶುಕ್ರವಾರ, 10 ಜನವರಿ 2025 (14:20 IST)
Photo Courtesy X
ಮಂಗಳೂರು: ಶಿವಮೊಗ್ಗ ರಾಗಿಗುಡ್ಡೆಯ 41 ವರ್ಷ ವಯಸ್ಸಿನ ರೇಖಾ ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಮಿದುಳು ನಿಷ್ಕ್ರಿಯಗೊಂಡಿದ್ದ ರೇಖಾ ಅವರ ಅಂಗಾಂಗ ದಾನ ಪ್ರಕ್ರಿಯೆ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಶುಕ್ರವಾರ ನಡೆಯಿತು.‌ ವೆನ್ಲಾಕ್ ಸರ್ಕಾರಿ ಆಸ್ಪತ್ರೆಯ 176 ವರ್ಷಗಳ‌ ಇತಿಹಾಸದಲ್ಲಿ ಮೊದಲ ಬಾರಿಗೆ ಅಂಗಾಂಗ ದಾನ ಪ್ರಕ್ರಿಯೆ ನಡೆದಿದೆ.

ಮಹಿಳೆಯ ಎರಡು ಕಣ್ಣುಗಳನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಹಾಗೂ ಲಿವರ್ ಅನ್ನು ಮೈಸೂರಿಗೆ ಝೀರೊ ಟ್ರಾಫಿಕ್ ನಲ್ಲಿ ಕೊಂಡೊಯ್ಯಲಾಯಿತು. ಆಂಬುಲೆನ್ಸ್ ಪುತ್ತೂರು, ಮಡಿಕೇರಿ ಮಾರ್ಗವಾಗಿ ಮೈಸೂರು ತಲುಪಲಿದೆ.

ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅಸ್ವಸ್ಥಗೊಂಡಿದ್ದ ಅವರನ್ನು ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಜ.6ರಂದು ಕರೆತರಲಾಗಿತ್ತು.

ಅವರ ಆರೋಗ್ಯ ದಿನದಿಂದ‌ ದಿನಕ್ಕೆ ಕ್ಷೀಣಿಸುತ್ತಿತ್ತು. ಅವರ ಮಿದುಳು ನಿಷ್ಕ್ರಿಯ ಗೊಂಡಿದ್ದನ್ನು ಕುಟುಂಬಸ್ಥರಿಗೆ ತಿಳಿಸಿ, ಅಂಗಾಂಗ ದಾನದ ಬಗ್ಗೆ ಅರಿವು ಮೂಡಿಸಲಾಯಿತು ಎಂದು ವೆನ್ಲಾಕ್ ಆಸ್ಪತ್ರೆಯ ವೈದ್ಯರು ತಿಳಿಸಿದರು.

ಎಲ್ಲ ರೀತಿಯ ಪರೀಕ್ಷೆಗಳನ್ನು ಪೂರ್ಣಗೊಳಿಸಿ, ಮಿದುಳು ನಿಷ್ಕ್ರಿಯ ಗೊಂಡಿರುವುದನ್ನು ಖಚಿತ ಪಡಿಸಿಕೊಂಡು ಮುಂದಿನ ಪ್ರಕ್ರಿಯೆ ನಡೆಸಲಾಯಿತು ಎಂದು ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕ ಡಾ.ಶಿವಪ್ರಕಾಶ್ ಮಾಹಿತಿ ನೀಡಿದರು.‌


Share this Story:

Follow Webdunia kannada

ಮುಂದಿನ ಸುದ್ದಿ

ಗ್ಯಾರಂಟಿ ಹೊರೆ ಅಲ್ಲಾಂದ್ರೆ ಬೆಲೆ ಏರಿಕೆ ಯಾಕೆ ಮಾಡ್ತೀರಿ: ಸಿದ್ದರಾಮಯ್ಯಗೆ ಪ್ರಶ್ನೆ